HEALTH TIPS

Google Photo ಮೆಮೊರಿ ಫುಲ್ ಮೆಸೇಜ್ ಬರುತ್ತಿದೆಯಾ? ಈ ಟ್ರಿಕ್ಸ್‌ನಿಂದ ಸ್ಟೋರೇಜ್ ಫ್ರೀ ಮಾಡಿ

Top Post Ad

Click to join Samarasasudhi Official Whatsapp Group

Qries

ಸ್ಮಾರ್ಟ್  ಫೋನ್ ಬಳಕೆ ಮಾಡೋ ಪ್ರತಿಯೊಬ್ಬರಿಗೂ ಫೋಟೋಗಳನ್ನು ಗೂಗಲ್ ಫೋಟೋಸ್ ಸ್ಟೋರೇಜ್‌ನಲ್ಲಿ ಸೇವ್ ಮಾಡಿ ಇಡಲಾಗುತ್ತೆ. ಆದರೆ ಒಂದಷ್ಟು ಫೋಟೋ ಸೇವ್ ಆದ ಬನ್ನಲ್ಲೇ ಸ್ಟೋರೇಜ್ ಫುಲ್ ಎಂದು ಮೆಸೇಜ್ ಬರುತ್ತಿದೆಯಾ, ಈ ಟ್ರಿಕ್ಸ್ ಫಾಲೋ ಮಾಡಿದರೆ ಸ್ಟೋರೇಜ್ ಸ್ಪೇಸ್ ಹೆಚ್ಚಾಗಲಿದೆ.

ಒಂದು ಕಾಲದಲ್ಲಿ ಫೋಟೋಗಳನ್ನ ಮೆಮೊರಿ ಕಾರ್ಡ್‌ಗಳಲ್ಲಿ ಸ್ಟೋರ್ ಮಾಡಲಾಗುತಿತ್ತು. ಆದ್ರೆ ಗೂಗಲ್ ಫೋಟೋಸ್ ಬಂದದ ಮೇಲೆ ಮೆಮೊರಿ ಕಾರ್ಡ್‌ಗಳ ಅವಶ್ಯಕತೆ ಇಲ್ಲ. ಫೋನಲ್ಲಿದ್ದ ಪ್ರತಿಯೊಂದು ಫೋಟೋ ಗೂಗಲ್ ಫೋಟೋಸ್‌ನಲ್ಲಿ ಸ್ಟೋರ್ ಆಗುತ್ತೆ. ಇದರಿಂದ ಸ್ಮಾರ್ಟ್‌ಫೋನ್ ಫಾರ್ಮ್ಯಾಟ್ ಆದ್ರೂ ಫೋಟೋಗಳನ್ನ ವಾಪಸ್ ತಗೋಬಹುದು.

ಆದ್ರೆ ಗೂಗಲ್ ಫೋಟೋಸ್‌ನಲ್ಲಿ ಮೆಮೊರಿ ಜಾಸ್ತಿಯಾದ್ರೆ, ಸ್ಟೋರೇಜ್ ಫುಲ್ ಅಂತ ಅಲರ್ಟ್ ಬರುತ್ತೆ. ಮೆಮೊರಿ ಕ್ಲಿಯರ್ ಮಾಡಿಲ್ಲ ಅಂದ್ರೆ ಮೇಲ್ಸ್ ಬರೋದಿಲ್ಲ ಅಂತ ಮೆಸೇಜ್ ಬರುತ್ತೆ. ಆದ್ರೆ ಸ್ಟೋರೇಜ್ ಹೆಚ್ಚಿಸಿಕೊಳ್ಳೋಕೆ ಒಂದು ಚಿಕ್ಕ ಟ್ರಿಕ್ ಇದೆ. ಆ ಟ್ರಿಕ್ ಏನು ಅಂತ ಹಂತ ಹಂತವಾಗಿ ನೋಡೋಣ.

ಫೋಟೋಗಳನ್ನ ಕಂಪ್ರೆಸ್ ಮಾಡಿ:

* ಇದಕ್ಕಾಗಿ ಮೊದಲಿಗೆ ಬ್ರೌಸರ್‌ನಲ್ಲಿ photos.google.com ಗೆ ಹೋಗಿ.

* ನಂತರ ಎಡಭಾಗದಲ್ಲಿರೋ ತ್ರಿ ಡಾಟ್ಸ್‌ನ್ನ ಕ್ಲಿಕ್ ಮಾಡಿ ಕೊನೆಯಲ್ಲಿ ಕಾಣುವ ಸ್ಟೋರೇಜ್ ಆಪ್ಷನ್ ಸೆಲೆಕ್ಟ್ ಮಾಡಿ.

* ಆಮೇಲೆ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದ್ರೆ ರಿಕವರಿ ಸ್ಟೋರೇಜ್ ಅಂತ ಆಪ್ಷನ್ ಕಾಣುತ್ತೆ. ಅದರ ಕೆಳಗಡೆ ಕಾಣುವ ಲರ್ನ್ ಮೋರ್ ಆಪ್ಷನ್ ಸೆಲೆಕ್ಟ್ ಮಾಡಿ.

* ತಕ್ಷಣ ರಿಕವರಿ ಸ್ಟೋರೇಜ್ ಪೇಜ್ ಓಪನ್ ಆಗುತ್ತೆ. ಇದರಲ್ಲಿ ಕೊನೆಯಲ್ಲಿ ಕಾಣುವ 'ಐ ಅಂಡರ್‌ಸ್ಟಾಂಡ್' ಅನ್ನೋ ಟಿಕ್ ಬಾಕ್ಸ್ ಕ್ಲಿಕ್ ಮಾಡಿ 'ಕಂಪ್ರೆಸ್ ಎಕ್ಸಿಸ್ಟಿಂಗ್ ಫೋಟೋಸ್ ಅಂಡ್ ವೀಡಿಯೋಸ್' ಮೇಲೆ ಕ್ಲಿಕ್ ಮಾಡಿ.

* ಇದರಿಂದ ಗೂಗಲ್ ಫೋಟೋಸ್‌ನಲ್ಲಿರೋ ಫೋಟೋಗಳು, ವೀಡಿಯೋಗಳು ಕಂಪ್ರೆಸ್ ಆಗಿ ಮೆಮೊರಿ ಜಾಸ್ತಿಯಾಗುತ್ತೆ.

ಸ್ಪೇಸ್ ಫ್ರೀ ಮಾಡಿ:

ಗೂಗಲ್ ಫೋಟೋಸ್‌ನಲ್ಲಿರೋ ಕೆಲವು ಬೇಡದಿರೋ ಕಂಟೆಂಟ್‌ನ್ನ ಡಿಲೀಟ್ ಮಾಡಿದ್ರೆ ಸ್ಟೋರೇಜ್ ಜಾಸ್ತಿಯಾಗುತ್ತೆ. ಇದಕ್ಕಾಗಿ ಮೊದಲಿಗೆ ನಿಮ್ಮ ಜೀಮೇಲ್ ಅಕೌಂಟ್ ಲಾಗಿನ್ ಆಗಿ. ಆಮೇಲೆ ಬ್ರೌಸರ್‌ನಲ್ಲಿ https://one.google.com/storage ಅಂತ ಸರ್ಚ್ ಮಾಡಿ. ನಂತರ 'ಫ್ರೀ ಅಪ್ ಅಕೌಂಟ್ ಸ್ಟೋರೇಜ್' ಮೇಲೆ ಕ್ಲಿಕ್ ಮಾಡಿ. ಸ್ಪಾಮ್, ಟ್ರಾಶ್, ಲಾರ್ಜ್ ಫೈಲ್ಸ್‌ನ ಡಿಲೀಟ್ ಮಾಡಬಹುದು.

ಕೆಲವೊಮ್ಮೆ ನಾವು ಫೋನಿನಲ್ಲಿ ತೆಗೆದ ಡೂಪ್ಲಿಕೇಟ್, ಬ್ಲರ್ ಫೋಟೋಗಳು ಕೂಡ ಗೂಗಲ್ ಫೋಟೋಸ್‌ನಲ್ಲಿ ಸ್ಟೋರ್ ಆಗಿರುತ್ತೆ. ನಿಜ ಹೇಳಬೇಕಂದ್ರೆ ಅವು ಬೇಕಾಗಿರಲ್ಲ. ಆದ್ರೆ ಸ್ಪೇಸ್ ವೇಸ್ಟ್ ಆಗುತ್ತೆ. ಅದಕ್ಕೆ ಅಂಥವುಗಳನ್ನ ಡಿಲೀಟ್ ಮಾಡಿದ್ರೆ ಸ್ಪೇಸ್ ಜಾಸ್ತಿಯಾಗುತ್ತೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries