ನವದೆಹಲಿ: ಆದಾಯ ತೆರಿಗೆ ಇಲಾಖೆ ಇಂಡಿಗೋಗೆ 944.20 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ಈ ಆದೇಶವನ್ನು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಮಾತೃ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್ ಶನಿವಾರ ಸ್ವೀಕರಿಸಿದೆ.
2021-22 ಸಾಲಿಗಾಗಿ ಐಟಿ ಇಲಾಖೆ ರೂ. 944.20 ಕೋಟಿ ದಂಡ ವಿಧಿಸುವ ಆದೇಶವನ್ನು ನೀಡಿದೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
"ಸೆಕ್ಷನ್ 143 (3) ಅಡಿಯಲ್ಲಿ ಮೌಲ್ಯಮಾಪನ (Assessment) ಆದೇಶದ ವಿರುದ್ಧ ಆದಾಯ ತೆರಿಗೆ ಕಮಿಷನರ್ ಮುಂದೆ ಕಂಪನಿಯು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂಬ ತಪ್ಪಾದ ತಿಳುವಳಿಕೆಯ ಆಧಾರದ ಮೇಲೆ ಆದೇಶವನ್ನು ನೀಡಲಾಗಿದೆ. ಆದಾಯ ತೆರಿಗೆ ಪ್ರಾಧಿಕಾ ಜಾರಿಗೊಳಿಸಿದ ಆದೇಶವು ಕಾನೂನಿಗೆ ಅನುಸಾರವಾಗಿಲ್ಲ ಮತ್ತು ತಪ್ಪಾಗಿದೆ ಎಂದು ನಂಬಿರುವುದಾಗಿ ಕಂಪನಿ ತಿಳಿಸಿದೆ.
ಕಂಪನಿಯು ಅದೇ ರೀತಿ ಸ್ಪರ್ಧಿಸಲಿದ್ದು, ಐಟಿ ಇಲಾಖೆ ಆದೇಶದ ವಿರುದ್ಧ ಸೂಕ್ತ ಕಾನೂನು ಹೋರಾಟ ನಡೆಸಲಿದೆ. ಅಲ್ಲದೇ, ಈ ಆದೇಶವು ಕಂಪನಿಯ ಹಣಕಾಸು, ಕಾರ್ಯಾಚರಣೆಗಳು ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಇಂಡಿಗೋ ಹೇಳಿದೆ.