HEALTH TIPS

IPLನಲ್ಲಿ ತಂಬಾಕು, ಮದ್ಯ ಜಾಹೀರಾತುಗಳನ್ನು ನಿಷೇಧಿಸಲು ಆರೋಗ್ಯ ಸಚಿವಾಲಯ ಸೂಚನೆ

ವದೆಹಲಿ: ಐಪಿಎಲ್ ಟೂರ್ನಿಯ ವೇಳೆ ಎಲ್ಲಾ ರೀತಿಯ ತಂಬಾಕು, ಮದ್ಯ ಜಾಹೀರಾತುಗಳನ್ನು ನಿಷೇಧಿಸುವಂತೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆಯೋಜಕರಿಗೆ ನಿರ್ದೇಶಿಸಿದೆ.

ಈ ಸಂಬಂಧ ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌ ಅವರಿಗೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಅತುಲ್‌ ಗೋಯೆಲ್‌ ಪತ್ರ ಬರೆದಿದ್ದಾರೆ.

'ದೇಶದ ಯುವಕರಿಗೆ ಮಾದರಿಯಾಗಿರುವ ಕ್ರಿಕೆಟ್‌ ಆಟಗಾರರು ಯಾವುದೇ ರೀತಿಯ ತಂಬಾಕು ಅಥವಾ ಮದ್ಯದ ಜಾಹೀರಾತುಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿರಬಾರದು. ಐಪಿಎಲ್‌ ಪಂದ್ಯಗಳು ಮತ್ತು ಅದರ ಸಂಬಂಧಿತ ಕಾರ್ಯಕ್ರಮಗಳು ನಡೆಯುವ ಕ್ರೀಡಾಂಗಣದ ಆವರಣದ ಒಳಗೆ ಹಾಗೂ ದೂರದರ್ಶನದಲ್ಲಿ ಪ್ರಸಾರವಾಗುವ ಅವಧಿಗಳಲ್ಲಿ, ಎಲ್ಲಾ ರೀತಿಯ ತಂಬಾಕು ಅಥವಾ ಮದ್ಯ ಜಾಹೀರಾತುಗಳನ್ನು ನಿಷೇಧಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು' ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜಾಹೀರಾತುಗಳ ಡಾರ್ಲಿಂಗ್ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಯ ವೇಳೆ ಬಹುತೇಕ ಭಾರತೀಯರು ಟಿ.ವಿ ಮುಂದೆಯೇ ಇರುತ್ತಾರೆ.

'ತಂಬಾಕು ಮತ್ತು ಮದ್ಯ ಸೇವನೆಯಿಂದಾಗಿ ಕ್ಯಾನ್ಸರ್‌, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದು, ಇದು ವಾರ್ಷಿಕ ಶೇ 70ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗುತ್ತಿದೆ. ವಿಶ್ವದಲ್ಲಿ ತಂಬಾಕು ಸಂಬಂಧಿತ ಸಾವುಗಳಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ' ಎಂದು ಗೋಯೆಲ್‌ ಪತ್ರದಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ಆರೋಗ್ಯವನ್ನು ಉತ್ತೇಜಿಸುವುದು ಕ್ರಿಕೆಟಿಗರ ನೈತಿಕ ಭಾಧ್ಯತೆಯಾಗಿದೆ. ಆರೋಗ್ಯಕರ, ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಕ್ರಿಕೆಟ್‌ ಆಟಗಾರರು ದೇಶದ ಯುವಕರಿಗೆ ಮಾದರಿಯಾಗಿದ್ದಾರೆ. ಐಪಿಎಲ್‌ ದೇಶದ ಅತಿದೊಡ್ಡ ಕ್ರೀಡಾ ವೇದಿಕೆಯಾಗಿದ್ದು, ಸಾರ್ವಜನಿಕರ ಆರೋಗ್ಯವನ್ನು ಉತ್ತೇಜಿಸಲು ಮತ್ತು ಸರ್ಕಾರದ ಆರೋಗ್ಯ ಉಪಕ್ರಮಗಳನ್ನು ಬೆಂಬಲಿಸಲು ಸಾಮಾಜಿಕ ಮತ್ತು ನೈತಿಕ ಬಾಧ್ಯತೆಯನ್ನು ಹೊಂದಿದೆ ಎಂದು ಗೋಯೆಲ್‌ ಪತ್ರದಲ್ಲಿ ಹೇಳಿದ್ದಾರೆ.

ಮಾರ್ಚ್‌ 22ರಿಂದ ಐಪಿಎಲ್‌ ಪಂದ್ಯಾವಳಿಗಳು ಪ್ರಾರಂಭವಾಗಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries