ಭಾರತದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕರು ಇದೀಗ ಪಾವತಿಗಳನ್ನು ಯುಪಿಐ ಮೂಲಕವೇ ಮಾಡುತ್ತಾರೆ. ಅದು ಗೂಗಲ್ ಪೇ, ಪೇಟಿಎಂ, ಫೋನ್‌ಪೇ ಸೇರಿದಂತೆ ಹಲವು ಆಯಪ್ ಮೂಲಕ ಯುಪಿಐ ಪಾವತಿಗಳನ್ನು ಮಾಡುತ್ತಿದ್ದಾರೆ.
ಇದೀಗ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ಕೆಲ ಅಪ್‌ಡೇಟ್ ಮಾಡಿದೆ. ಈ ಪೈಕಿ ಯುಪಿಐ ಲೈಟ್ ಪಾವತಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಪ್ರಮುಖವಾಗಿ ಪಾವತಿ ಮಿತಿ ಹೆಚ್ಚಳ, ಬ್ಯಾಲೆನ್ಸ್ ಮಿತಿ ಹೆಚ್ಚಳ ಸೇರಿದಂತೆ ಹಲವು ಬದಲಾವಣೆ ಮಾಡಲಾಗಿದೆ. ಹೀಗಾಗಿ ಮುಂದಿನ ಪಾವತಿ ಮಾಡುವ ಮೊದಲು ಬದಲಾವಣೆ ಬಗ್ಗೆ ತಿಳಿದುಕೊಳ್ಳಿ.
ಕಳೆದ ವರ್ಷದ ಅಂತ್ಯದಲ್ಲಿ NPCI ಈ ಕುರಿತ ಬದಲಾವಣೆಗೆ ಸೂಚಿಸಿತ್ತು. ಇದೀಗ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಮಾರ್ಚ್ ತಿಂಗಳಿನಿಂದಲೇ ಹೊಸ ಅಪ್‌ಡೇಟ್ ಜಾರಿಯಾಗಿದೆ. ಈ ಬದಲಾವಣೆ ಪ್ರಕಾರ, ಪ್ರತಿ ಟ್ರಾನ್ಸಾಕ್ಷನ್ ಮಿತಿಯನ್ನು 1,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಒಟ್ಟು ಬ್ಯಾಲೆನ್ಸ್ ಮಿತಿಯನ್ನು 5,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಫೆಬ್ರವರಿ 27 ರಂದು NPCI ಅಧಿಸೂಚನೆ ಹೊರಡಿಸಲಾಗಿದೆ.
ಈ ಹಿಂದೆ ಯುಪಿಐ ಲೈಟ್‌ನಲ್ಲಿ ಒಂದೊಂದು ಟ್ರಾನ್ಸಾಕ್ಷನ್ ಲಿಮಿಟ್ ₹500 ಆಗಿತ್ತು. ಇದೀಗ 1,000 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಹೊಸ 'ಟ್ರಾನ್ಸ್‌ಫರ್ ಔಟ್', 'ಆಟೋ ಟಾಪ್-ಅಪ್' ಫೀಚರ್‌ಗಳನ್ನು ಲಾಂಚ್ ಮಾಡಲಾಗಿದೆ
ಪಿನ್ ಇಲ್ಲದೆ ₹1,000 ವರೆಗೆ ಟ್ರಾನ್ಸಾಕ್ಷನ್ ಇದರಿಂದ ಸಾಧ್ಯ.
NPCI ಈ ಬದಲಾವಣೆಗಳನ್ನು ಫೆಬ್ರವರಿ 27, 2025 ರಂದು ಅಧಿಸೂಚನೆ ಮೂಲಕ ಕಡ್ಡಾಯ ಮಾಡಿದೆ. ಎಲ್ಲಾ ಬ್ಯಾಂಕುಗಳು, ಯುಪಿಐ ಆಯಪ್‌ಗಳು ಮಾರ್ಚ್ 31, 2025 ರವರೆಗೆ ಒಳಗೆ ಈ ನಿಯಮ ಜಾರಿಗೊಳಿಸಬೇಕು
ಯುಪಿಐ ಲೈಟ್ ಹೊಸ 'ಟ್ರಾನ್ಸ್‌ಫರ್ ಔಟ್' ಫೀಚರ್ ಏನು?
ಈಗ ಯುಪಿಐ ಲೈಟ್ ಯೂಸರ್ಸ್ ಉಳಿದ ದುಡ್ಡನ್ನು ವಾಪಸ್ ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಕೊಳ್ಳಬಹುದು. ಇದಕ್ಕಾಗಿ ಯುಪಿಐ ಲೈಟ್ ಡಿಸೇಬಲ್ ಮಾಡಬೇಕಾದ ಅವಶ್ಯಕತೆ ಇಲ್ಲ. ಇದರಿಂದ ಸಣ್ಣ ಪೇಮೆಂಟ್‌ಗಳನ್ನು ಮ್ಯಾನೇಜ್ ಮಾಡುವುದು ಇನ್ನೂ ಸುಲಭ ಆಗುತ್ತದೆ.
ಯುಪಿಐ ಲೈಟ್ ಆಟೋ ಟಾಪ್-ಅಪ್ ಫೀಚರ್: ಏನಿದೆ ಸ್ಪೆಷಲ್?
ಈಗ ಯುಪಿಐ ಲೈಟ್ ಬ್ಯಾಲೆನ್ಸ್ ಆಟೋಮ್ಯಾಟಿಕ್ ಆಗಿ ರೀಚಾರ್ಜ್ ಆಗುತ್ತದೆ.
ಬ್ಯಾಲೆನ್ಸ್ ಒಂದು ಲಿಮಿಟ್ ಗಿಂತ ಕಡಿಮೆ ಹೋದರೆ ಆಟೋಮ್ಯಾಟಿಕ್ ಆಗಿ ಫಂಡ್ ಟ್ರಾನ್ಸ್‌ಫರ್ ಆಗುತ್ತದೆ. ಇದರಿಂದ ಪೇಮೆಂಟ್ ನಿಲ್ಲುವುದಿಲ್ಲ.
ಯುಪಿಐ ಲೈಟ್‌ನಲ್ಲಿ ಟ್ರಾನ್ಸಾಕ್ಷನ್ ಲಿಮಿಟ್ ಹೆಚ್ಚಾಗಿದೆ
ಡಿಸೆಂಬರ್ 4, 2024 ರಂದು RBI ಕೊಟ್ಟ ನೋಟಿಫಿಕೇಶನ್ ಪ್ರಕಾರ ಯುಪಿಐ ಲೈಟ್‌ಗೆ ಹೊಸ ಲಿಮಿಟ್ಸ್ ಹೀಗಿವೆ:
ಒಂದೊಂದು ಟ್ರಾನ್ಸಾಕ್ಷನ್ ಲಿಮಿಟ್ ₹500 (ಹಿಂದೆ ₹100)
ಹೊಸ ಮ್ಯಾಕ್ಸ್ ಟ್ರಾನ್ಸಾಕ್ಷನ್ ಲಿಮಿಟ್ ₹1,000
ಒಟ್ಟು ಬ್ಯಾಲೆನ್ಸ್ ಲಿಮಿಟ್ ₹5,000
6 ತಿಂಗಳಿನಿಂದ ಇನಾಕ್ಟಿವ್ ಯುಪಿಐ ಲೈಟ್ ಅಕೌಂಟ್ಸ್ ಮೇಲೆ ಹೊಸ ರೂಲ್
ಯಾವ ಯುಪಿಐ ಲೈಟ್ ಅಕೌಂಟ್‌ನಿಂದ ಆದರೂ 6 ತಿಂಗಳವರೆಗೆ ಟ್ರಾನ್ಸಾಕ್ಷನ್ ಆಗದಿದ್ದರೆ ಆ ಅಕೌಂಟ್ ಅನ್ನು ಇನಾಕ್ಟಿವ್ ಆಗಿ ಭಾವಿಸಿ ಉಳಿದ ದುಡ್ಡನ್ನು ಯೂಸರ್ ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುತ್ತದೆ. ಈ ರೂಲ್ ಅನ್ನು ಜೂನ್ 30, 2025 ರವರೆಗೆ ಜಾರಿ ಮಾಡ್ತಾರೆ.
ಯುಪಿಐ ಲೈಟ್‌ನಿಂದ ದುಡ್ಡು ಹೇಗೆ ಕಳುಹಿಸುವುದು?
Step 1: ನಿಮಗೆ ಇಷ್ಟವಾದ ಯುಪಿಐ ಲೈಟ್ ಆಯಪ್ (Google Pay, PhonePe, Paytm ಇತ್ಯಾದಿ) ಓಪನ್ ಮಾಡಿ.
Step 2: ಯುಪಿಐ ಲೈಟ್ ಸೆಕ್ಷನ್‌ನಲ್ಲಿ ಪೇಮೆಂಟ್ ಆಪ್ಷನ್ ಮೇಲೆ ಟ್ಯಾಪ್ ಮಾಡಿ.
Step 3: ರಿಸೀವರ್ ಯುಪಿಐ ಐಡಿ ಎಂಟರ್ ಮಾಡಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.
Step 4: ₹500 ವರೆಗೆ ಅಮೌಂಟ್ ಎಂಟರ್ ಮಾಡಿ.
Step 5: ಪಿನ್ ಎಂಟರ್ ಮಾಡದೆ ತಕ್ಷಣ ಪೇಮೆಂಟ್ ಪೂರ್ತಿ ಮಾಡಿ.