ಮೊಬೈಲ್ ಫೋನ್ ಇತ್ತೀಚಿನ ದೈನಂದಿನ ಜೀವನದಲ್ಲೂ ಒಂದು ಅಂಗವಾಗಿ ಬಿಟ್ಟಿದೆ. ಒಂದು ಕ್ಷಣ ಫೋನ್ ಇಲ್ಲವಾದ್ರೆ ಏನೋ ಕಳೆದಕೊಂಡ ಭಾವನೆ. ಕೈ-ಕೈ ಹಿಸಿಕೊಂಡು ಕುಳಿತು ಬಿಡುತ್ತೇವೆ. ಏಕೆಂದರೆ, ಇಂದಿನ ಬಹುತೇಕ ಕೆಲಸಗಳು ಫೋನ್ನಲ್ಲಿಯೇ ನಡೆಯುತ್ತಿದೆ. ಅಲ್ಲದೆ, ಶೇ.90ರಷ್ಟು ಹಣದ ವಹಿವಾಟು ಫೋನ್ ಮೂಲಕವೇ(ಯುಪಿಐ) ನಡೆಯುತ್ತಿದೆ.
ಇಂತಹ ಸಮಯದಲ್ಲಿ ಫೋನ್ ಏನಾದ್ರು ಕಳೆದುಹೋದ್ರೆ ವಹಿವಾಟು ಹೇಗೆ? ಅಲ್ಲದೆ, ಕಳೆದು ಹೋದ ಫೋನ್ನಲ್ಲಿ ಯುಪಿಐ ಡಿಲೀಟ್ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ..
ಅಧಿಕೃತದಿಂದ ಅನಧಿಕೃತದವರೆಗೆ ಎಲ್ಲಾ ಡೇಟಾವನ್ನು ನಮ್ಮ ಫೋನ್ಗಳಲ್ಲಿಯೇ ಸಂಗ್ರಹಿಸಲಾಗುತ್ತದೆ. ಅಲ್ಲದೆ, ಇದರಲ್ಲೂ ನಮಗೆ ಯಾವಾಗಲೂ ಅಗತ್ಯವಿರುವ ಎಲ್ಲಾ ಯುಪಿಐ ಪಾವತಿ ಅಪ್ಲಿಕೇಶನ್ಗಳನ್ನು ಕೂಡ ಇರುತ್ತದೆ.
ಆದರೆ ನಿಮ್ಮ ಫೋನ್ ಎಲ್ಲೋ ಕದ್ದರೆ ಅಥವಾ ಕಳೆದುಹೋದರೆ ನೀವು ಏನು ಮಾಡುತ್ತೀರಿ? ನಿಮ್ಮ ಪೇಟಿಎಂ ಮತ್ತು ಗೂಗಲ್ ಖಾತೆಗಳನ್ನು ಸ್ವಯಂಚಾಲಿತವಾಗಿ ಮರಳಿ ಪಡೆಯುವುದು ಹೇಗೆ? ನೀವು ನಿಮ್ಮ ಖಾತೆಯನ್ನು ಅಳಿಸಲು ಬಯಸಿದರೆ, ಫೋನ್ ಇಲ್ಲದೆ ನಿಮ್ಮ ಖಾತೆಯನ್ನು ಹೇಗೆ ಅಳಿಸಬಹುದೇ.. ನೋಡೋಣ
ಪೇಟಿಎಂ ಸೇರಿ ಎಲ್ಲಾ UPI ಖಾತೆ ಅಳಿಸೊದೇಗೆ..?
ಸಾಮಾನ್ಯವಾಗಿ ಎಲ್ಲಾ ಯುಪಿಐ ಅಪ್ಲಿಕೇಶನ್ಗಳಲ್ಲಿ ಬಹುತೇಕ ಮತ್ತು ಅಧಿಕವಾಗಿ ಪೇಟಿಎಂ ಅನ್ನು ಬಳಸಲಾಗುತ್ತದೆ. ಒಂದು ವೇಳೆ ನಿಮ್ಮ ಫೋನ್ ಎಲ್ಲೋ ಕದ್ದರೆ ಅಥವಾ ಕಳೆದುಹೋದರೆ ನೀವು ಅ ಫೋನ್ನಲ್ಲಿ ಬಳಸುತ್ತಿರುವ ಯುಪಿಐ ಖಾತೆಯನ್ನು ಅಳಿಸಲು(ಡಿಲೀಟ್) ಮೊದಲು, ಮತ್ತೊಂದು ಪೋನ್ನಲ್ಲಿ ನಿಮ್ಮ ದಾಖಲಾತಿಗಳನ್ನು ಒದಗಿಸುವ ಮೂಲಕ ರಿಸ್ಟೋರ್ ಮಾಡಿಕೊಳ್ಳಬೇಕಾಗುತ್ತದೆ.
ನೀವು ಇತರ ಸಾಧನದಲ್ಲಿ(ಮತ್ತೊಂದು ಫೋನ್) ನಿಮ್ಮ ಹಳೆಯ ಖಾತೆಯ ಬಳಕೆದಾರ ಹೆಸರು, ಪಾಸ್‌ವರ್ಡ್ ಮತ್ತು ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಖಾತೆಯನ್ನು ತೆರೆದ ನಂತರ, ಮೊದಲು ಬಳಕೆದಾರರು ಹ್ಯಾಂಬರ್ಗರ್ ಮೆನುಗೆ ಹೋಗಬೇಕಾಗುತ್ತದೆ. ಅಲ್ಲಿಂದ, ಪ್ರೊಫೈಲ್ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ, ಬಳಕೆದಾರರು 'ಭದ್ರತೆ ಮತ್ತು ಗೌಪ್ಯತೆ' ವಿಭಾಗಕ್ಕೆ ಹೋಗಬೇಕಾಗುತ್ತದೆ.
ಈ ವಿಭಾಗದಲ್ಲಿ, ನೀವು 'ಎಲ್ಲಾ ಸಾಧನಗಳಲ್ಲಿ ಖಾತೆಗಳನ್ನು ನಿರ್ವಹಿಸಿ' ಆಯ್ಕೆಯನ್ನು ಪಡೆಯುತ್ತೀರಿ. ಅಲ್ಲಿಗೆ ಹೋಗುವ ಮೂಲಕ ಬಳಕೆದಾರರು ಖಾತೆಯಿಂದ ಲಾಗ್ ಔಟ್ ಆಗಬೇಕಾಗುತ್ತದೆ. ನೀವು ಲಾಗ್ ಔಟ್ ಆಗುವಾಗ, ನೀವು ಖಚಿತವಾಗಿ ಹಾಗೆ ಮಾಡುತ್ತೀರಾ ಎಂದು ಸಿಸ್ಟಮ್ ನಿಮ್ಮನ್ನು ಕೇಳುತ್ತದೆ, ನಂತರ ನೀವು ಹೌದು ಆಯ್ಕೆಯನ್ನು ಆರಿಸಬೇಕು. ಇದೇ ರೀತಿ ಪೋನ್ ಪೇ ಮತ್ತು ಗೂಗಲ್ ಪೇ ಸೇರಿದಂತೆ ಇತರೆ ವಿವಿಧ ಯುಪಿಐಗಳ ಸೆಟ್ಟಿಂಗ್ನಲ್ಲಿ ಹೋಗಿ ಇದೇ ರೀತಿ ಮಾಡಬೇಕಾಗುತ್ತದೆ.