HEALTH TIPS

Russia- Ukraine Conflict | ಏರ್ಪಡದ ಕದನ ವಿರಾಮ: ಭಾರಿ ಡ್ರೋನ್‌ ದಾಳಿ

Top Post Ad

Click to join Samarasasudhi Official Whatsapp Group

Qries

ಕೀವ್‌: ಕದನ ವಿರಾಮಕ್ಕೆ ಪುಟಿನ್ ಷರತ್ತುಗಳನ್ನು ವಿಧಿಸಿದ ನಂತರ, ರಷ್ಯಾ ಮತ್ತು ಉಕ್ರೇನ್‌ ಸೇನಾ ಪಡೆಗಳು ಶನಿವಾರ ರಾತ್ರಿಯಿಡೀ ಪರಸ್ಪರರ ನೆಲಗಳ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿವೆ. ಪ್ರಮುಖ ನೆಲೆಗಳನ್ನು ಗುರಿಯಾಗಿಸಿಕೊಂಡು ಪರಸ್ಪರರು ಪ್ರಯೋಗಿಸಿದ್ದ 100ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಭಯ ಸೇನಾಪಡೆಗಳೂ ಹೇಳಿಕೊಂಡಿವೆ.

30 ದಿನಗಳ ಕದನ ವಿರಾಮಕ್ಕೆ ಅಮೆರಿಕ ಮುಂದಿಟ್ಟಿರುವ ಪ್ರಸ್ತಾವದ ಕುರಿತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಅಮೆರಿಕ ರಾಯಭಾರಿ ಸ್ಟೀವ್‌ ವಿಟ್ಕಾಫ್‌ ಅವರು ಭೇಟಿಯಾಗಿ ಚರ್ಚಿಸಿದ 24 ತಾಸುಗಳಲ್ಲಿ ಭಾರಿ ವೈಮಾನಿಕ ದಾಳಿ ನಡೆದಿದೆ.

ರಷ್ಯಾ ಪಡೆಗಳು ರಾತ್ರಿಯಿಡಿ 178 ಡ್ರೋನ್‌ಗಳು ಮತ್ತು ಎರಡು ಗುರಿ ನಿರ್ದೇಶಿತ ಕ್ಷಿಪಣಿಗಳನ್ನು ಹಾರಿಸಿವೆ. 130 ಡ್ರೋನ್‌ಗಳನ್ನು ಹೊಡೆದುರುಳಿಸಲಾಯಿತು. ಇನ್ನು 38 ಡ್ರೋನ್‌ಗಳು ಗುರಿಮುಟ್ಟಲು ವಿಫಲವಾಗಿವೆ ಎಂದು ಉಕ್ರೇನ್‌ ಸೇನೆ ಹೇಳಿದೆ.

ನಿಪ್ರೊಪೆಟ್ರೊವ್‌ಸ್ಕ್‌ ಮತ್ತು ಒಡೆಸಾ ಪ್ರದೇಶಗಳಲ್ಲಿ ಇಂಧನ ಮೂಲಸೌಕರ್ಯಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಯಾಗಿದ್ದು, ಗಂಭೀರ ಹಾನಿಯಾಗಿದೆ ಎಂದು ಉಕ್ರೇನ್‌ ಖಾಸಗಿ ಇಂಧನ ಕಂಪನಿ ಡಿಟಿಇಕೆ ಹೇಳಿದೆ.

ಇನ್ನು ಉಕ್ರೇನ್‌ ಹಾರಿಸಿದ ಡ್ರೋನ್‌ಗಳನ್ನು ವೋಲ್ಗೊಗ್ರಾಡ್‌ ಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ. ಕ್ರಾಸ್ನೋರ್‌ಮಿಸ್ಕಿ ನಗರದಲ್ಲಿ, ಲುಕೋಯಿಲ್‌ ತೈಲ ಸಂಸ್ಕರಣಾಗಾರದ ಹತ್ತಿರವೇ ಡ್ರೋನ್‌ ಅವಶೇಷಗಳು ಬಿದ್ದು ಬೆಂಕಿ ಹೊತ್ತಿತು ಎಂದು ರಷ್ಯಾ ಸರ್ಕಾರ ಹೇಳಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ, ಹತ್ತಿರದ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

'ಕದನ ವಿರಾಮವನ್ನು ತಾವು ತಾತ್ವಿಕವಾಗಿ ಬೆಂಬಲಿಸುತ್ತೇವೆ. ಆದರೆ, ಅದನ್ನು ಒಪ್ಪಿಕೊಳ್ಳುವ ಮೊದಲು ಹಲವು ವಿಷಯಗಳನ್ನು ಸ್ಪಷ್ಟಪಡಿಸಬೇಕು' ಎಂದು ಪುಟಿನ್‌ ಗುರುವಾರವಷ್ಟೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಉಕ್ರೇನ್‌ ಈಗಾಗಲೇ ಕದನ ವಿರಾಮ ಪ್ರಸ್ತಾವವನ್ನು ಅನುಮೋದಿಸಿದೆ. ಆದರೂ ಉಕ್ರೇನ್‌ ನಾಯಕರು, ರಷ್ಯಾ ಇಂತಹ ಒಪ್ಪಂದಕ್ಕೆ ಬದ್ಧವಾಗುವ ಬಗ್ಗೆ ಬಹಿರಂಗವಾಗಿಯೆ ಅನುಮಾನ ವ್ಯಕ್ತಪಡಿಸಿದ್ದಾರೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries