ಎಲಾನ್ ಮಸ್ಕ್ ಒಡೆತನದ ಎಕ್ಸ್ ನ ಕೃತಕ ಬುದ್ಧಿ ಮತ್ತೆ (AI) ಟೂಲ್ Grok ನಕಾರಾತ್ಮಕ ಅಂಶಗಳಿಂದಾಗಿ ಸುದ್ದಿಯಾಗುತ್ತಿದೆ.
ಭಾರತೀಯ ಗ್ರಾಹಕರು Grok ಗೆ ಹಿಂದಿ ಭಾಷೆಯಲ್ಲಿ ನಿಂದನೀಯ ಭಾಷೆಯನ್ನು ಹೇಳಿಕೊಟ್ಟಿದ್ದು, ಈ ಟೂಲ್ ಈಗ ಎಲ್ಲದಕ್ಕೂ ಬೈಗುಳ ಭಾಷೆಯಲ್ಲೇ ಉತ್ತರ ನೀಡುತ್ತಿದೆ.
ವ್ಯಕ್ತಿಯೋರ್ವ ಮ್ಯೂಚ್ಯುಯಲ್ ಫಂಡ್ಸ್ ಬಗ್ಗೆ ಕೇಳಿದ್ದ ಪ್ರಶ್ನೆಗೂ ಚಾಟ್ ಬಾಟ್ ಗ್ರೋಕ್ (Grok) ಬೈಗುಳದ ಮೂಲಕವೇ ಉತ್ತರ ನೀಡಿದ್ದು, ರಸ್ತೆ ಬದಿಯ ಟಪೋರಿಯಂತೆ ತಯಾರಾಗುತ್ತಿದೆ.
ಇದರ ಜೊತೆಗೆ ನೆಟ್ಟಿಗರೂ ಸಹ ಎಐ ಟೂಲ್ ಗೆ ನಿಂದನಾತ್ಮಕ ಭಾಷೆಯನ್ನು ಕಲಿಸುತ್ತಿದ್ದು, ಇದಕ್ಕೆ ತಕ್ಕಂತೆಯೇ ಚಾಟ್ ಬಾಟ್ ಉತ್ತರಿಸುತ್ತಿದೆ. ಈ ವಿಷಯವಾಗಿ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಇಷ್ಟೇ ಅಲ್ಲದೇ ತಮಾಷೆಯ ಪ್ರಶ್ನೆಗಳಿಗೆ ತಮಾಷೆಯಾಗಿಯೇ ಗ್ರಾಕ್ ಉತ್ತರಿಸುತ್ತಿದೆ. ತನ್ನ ಮ್ಯೂಚುಯಲ್ ಗಳ ಪಟ್ಟಿಯನ್ನು ನೀಡುವಂತೆ ಕೇಳಿದ ಎಕ್ಸ್ ಗ್ರಾಹಕನೊಬ್ಬನಿಗೆ Grok ಹೋಗಿ ಅನುಯಾಯಿಗಳ ಪಟ್ಟಿ ನೋಡ್ಕೊ ಎಂದು ಉತ್ತರಿಸಿದೆ.