HEALTH TIPS

ಗ್ರೆನೇಡ್ ಜೊತೆ ಅಯೋಧ್ಯೆಗೆ ತೆರಳುತ್ತಿದ್ದ ಉಗ್ರ:Sleeper Cell ಆಯಾಮದಲ್ಲಿ ತನಿಖೆ

ಫರಿದಾಬಾದ್: ಭಯೋತ್ಪಾದಕನೆಂದು ಶಂಕಿಸಿ ಅಯೋಧ್ಯೆಗೆ ತೆರಳುತ್ತಿದ್ದ 19 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಸ್ಲೀಪರ್ ಸೆಲ್‌ಗಳ ಪಾತ್ರದ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಫೈಜಾಬಾದ್‌ನ ಮಿಲ್ಕಿಪುರ ಪಟ್ಟಣದ ನಿವಾಸಿ ಅಬ್ದುಲ್ ರೆಹಮಾನ್ ಎಂಬುವನನ್ನು ಭಾನುವಾರ ಫರಿದಾಬಾದ್ ಬಳಿಯ ಪಲ್ವಾಲ್‌ನಿಂದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಹರಿಯಾಣ ವಿಶೇಷ ಕಾರ್ಯಪಡೆಯ ಜಂಟಿ ತಂಡವು ಬಂಧಿಸಿತ್ತು.

ರೆಹಮಾನ್ ವಿರುದ್ಧ ಫರಿದಾಬಾದ್‌ನ ದಬುವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆತನನ್ನು ನಗರ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಮೂಲಗಳ ಪ್ರಕಾರ, ಫರಿದಾಬಾದ್‌ನ ಪಾಲಿ ಗ್ರಾಮದ ಬಳಿಯ ಪಾಳುಬಿದ್ದ ಮನೆಯಲ್ಲಿ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ಹುದುಗಿಸಿಟ್ಟಿರುವುದಾಗಿ ರೆಹಮಾನ್ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾನೆ.

ರೆಹಮಾನ್‌ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಂಪರ್ಕದಲ್ಲಿದ್ದಾನೆ ಎಂದು ಎಸ್‌ಟಿಎಫ್ ಅಧಿಕಾರಿ ಹೇಳಿದ್ದು, ಮಾರ್ಚ್ 4ರಂದು ಅಯೋಧ್ಯೆಗೆ ತೆರಳಲು ಉದ್ದೇಶಿಸಿದ್ದ.

'ಈ ಪ್ರಕರಣ ಅತ್ಯಂತ ಸೂಕ್ಷ್ಮವಾದುದಾಗಿದ್ದು, ತನಿಖೆ ನಡೆಯುತ್ತಿದೆ. ಈ ಕುರಿತಂತೆ ಈಗಲೇ ಏನನ್ನೂ ಹೇಳಲು ಬರುವುದಿಲ್ಲ' ಎಂದು ಅಧಿಕಾರಿ ಹೇಳಿದ್ದಾರೆ.

ಉಗ್ರ ಸಂಘಟನೆಯ ಹ್ಯಾಂಡ್ಲರ್ ತನಗೆ ಎರಡು ಗ್ರೆನೇಡ್ ನೀಡಿದ್ದಾಗಿ ಹೇಳಿರುವ ರೆಹಮಾನ್, ಆತನ ಹೆಸರು ತಿಳಿದಿಲ್ಲ ಎಂದಿದ್ದಾನೆ.

ಭಾನುವಾರ ಫೈಸಾಬಾದ್‌ನಿಂದ ಫರಿದಾಬಾದ್‌ಗೆ ಬಂದ ರೆಹಮಾನ್, ಗ್ರೆನೇಡ್‌ ಜೊತೆಗೆ ರೈಲಿನಲ್ಲಿ ಅಯೋಧ್ಯೆಗೆ ತೆರಳಲು ಉದ್ದೇಶಿಸಿದ್ದ. ಅಷ್ಟರೊಳಗೆ ಬಂಧನವಾಗಿದೆ.

ಫರಿದಾಬಾದ್‌ನಲ್ಲಿ ರೆಹಮಾನ್‌ಗೆ ಸ್ಲೀಪರ್ ಸೆಲ್ ಬೆಂಬಲ ನೀಡುತ್ತಿದೆ ಮತ್ತು ಅವರಿಗೆ ಹ್ಯಾಂಡ್ ಗ್ರೆನೇಡ್‌ಗಳನ್ನು ಒದಗಿಸುತ್ತಿದೆ ಎಂಬ ಮಾಹಿತಿ ಹರಿಯಾಣ ಎಸ್‌ಟಿಎಫ್‌ಗೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗುಪ್ತಚರ ಸಂಸ್ಥೆಗಳು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿವೆ. ಈ ಸಂಚಿಗೆ ಸಂಬಂಧಿಸಿದ ಯಾವುದೇ ಸ್ಲೀಪರ್ ಸೆಲ್‌ಗಳನ್ನು ನಾಶಮಾಡಲು ರಾಜ್ಯ ಭದ್ರತಾ ಪಡೆಗಳೊಂದಿಗೆ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.

ಬಂಧಿತ ಶಂಕಿತನ ಸ್ಥಳೀಯ ಸಂಪರ್ಕಗಳು, ಸ್ಲೀಪರ್ ಸೆಲ್‌ಗಳು ಮತ್ತು ಲಾಜಿಸ್ಟಿಕ್ಸ್ ಬೆಂಬಲವನ್ನು ಗುರುತಿಸಿ ಅದನ್ನು ನಾಶ ಮಾಡಲು ಹರಿಯಾಣ ಎಸ್‌ಟಿಎಫ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries