HEALTH TIPS

ಭಾರತದ ಷೇರುಪೇಟೆ W ಆಕಾರದಲ್ಲಿ ಚೇತರಿಕೆ ಕಾಣಲಿದೆಯಂತೆ; ಏನಿದು ಡಬ್ಲ್ಯು ಶೇಪ್ ರಿಕವರಿ?

ನವದೆಹಲಿ: ಭಾರತದ ಷೇರು ಮಾರುಕಟ್ಟೆ (stock market) ಕಳೆದ ಮೂರ್ನಾಲ್ಕು ಸೆಷನ್​​ಗಳಿಂದ (ಕಾರ್ಯ ದಿನ) ಚೇತರಿಕೆಯ ಹಾದಿಯಲ್ಲಿದೆ. 22,000 ಅಂಕಗಳ ಮಟ್ಟಕ್ಕೆ ಹೋಗಿದ್ದ ನಿಫ್ಟಿ50 ಸೂಚ್ಯಂಕ ಇದೀಗ 22,600 ಅಂಕಗಳಿಗಿಂತ ಮೇಲೆ ಹೋಗಿದೆ. ಈ ಮಧ್ಯೆ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಚೀಫ್ ಮಾರ್ಕೆಟ್ ಸ್ಟ್ರಾಟಿಜಿಸ್ಟ್ ಆಗಿರುವ ಆನಂದ್ ಜೇಮ್ಸ್ ಒಂದು ಕುತೂಹಲ ವಿಚಾರ ಹಂಚಿಕೊಂಡಿದ್ದಾರೆ.

ಎಕನಾಮಿಕ್ ಟೈಮ್ಸ್​​ಗೆ ನೀಡಿದ ಸಂದರ್ಶನದಲ್ಲಿ ಅವರು ನಿಫ್ಟಿ ಇಂಡೆಕ್ಸ್ ಇಂಗ್ಲೀಷ್​ನ W (ಡಬ್ಲ್ಯು) ಅಕ್ಷರ ಆಕಾರದಲ್ಲಿ ಚೇತರಿಕೆ (W shaped recovery) ಕಾಣಬಹುದು ಎಂದಿದ್ದಾರೆ. ಡಬ್ಲ್ಯು ಆಕಾರ ದಾಟಿದ ಬಳಿಕ ಷೇರು ಮಾರುಕಟ್ಟೆ ಗಟ್ಟಿಯಾಗಿ ಮೇಲೇರುತ್ತದೆ ಎಂಬುದು ಅವರ ಅನಿಸಿಕೆ.

ಏನಿದು W ಆಕಾರದ ಚೇತರಿಕೆ?

ಒಂದು ಆರ್ಥಿಕತೆ ಅಥವಾ ಮಾರುಕಟ್ಟೆ ಹೇಗೆ ಸಾಗಬಹುದು ಎಂಬುದಕ್ಕೆ ಸೂಚಕವಾಗಿ ನೀವು K, W, V ಇತ್ಯಾದಿ ಆಕಾರಗಳನ್ನು ತಜ್ಞರು ಬಳಸುವುದನ್ನು ಕೇಳಿರಬಹುದು. ಈ ಅಕ್ಷರಗಳು ಗ್ರಾಫಿಕಲ್ ಆಗಿರುತ್ತವೆ. V ಆಕಾರದಲ್ಲಿ ಮಾರುಕಟ್ಟೆ ಒಮ್ಮಿಂದೊಮ್ಮೆ ಕುಸಿಯುತ್ತದೆ. ನಂತರ ಅಷ್ಟೇ ವೇಗವಾಗಿ ಬೆಳೆಯುತ್ತದೆ. ಆದರೆ, W ಶೇಪ್ ರಿಕವರಿಯಲ್ಲಿ ಮಾರುಕಟ್ಟೆ ನಿರ್ದಿಷ್ಟ ಭಾಗದಷ್ಟು ಕುಸಿತ ಕಾಣುತ್ತದೆ. ಮತ್ತೆ ಅದು ಮೇಲೇರುತ್ತದೆ. ಮತ್ತೆ ಕುಸಿಯುತ್ತದೆ. ನಂತರ ಮತ್ತೆ ಅದೇ ಮೇಲ್ಮಟಕ್ಕೆ ವಾಪಸ್ ಬರುತ್ತದೆ. ಅಂದರೆ W ಆಕಾರದಲ್ಲಿ ಅದು ಏರಿಳಿತ ಕಾಣುತ್ತದೆ.

ನಿಫ್ಟಿ 23,000 ಅಂಕಗಳಲ್ಲಿ ತಳಮಳ

ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್​ನ ಆನಂದ್ ಜೇಮ್ಸ್ ಪ್ರಕಾರ ನಿಫ್ಟಿ ಸೂಚ್ಯಂಕ 23,000 ಅಂಕಗಳ ಸಮೀಪದ ಮಟ್ಟದಲ್ಲಿ ತೀವ್ರ ಒತ್ತಡ ಕಾಣಬಹುದು. ಬಳಿಕ ಅದು ಮತ್ತೊಮ್ಮೆ 22,000 ಅಂಕಗಳ ಮಟ್ಟಕ್ಕೆ ಕುಸಿಯಬಹುದು. ಅದಾದ ಬಳಿಕ ಮತ್ತೆ ಅದು ಚೇತರಿಸಿಕೊಂಡು 23,000 ಅಂಕಗಳ ಗಡಿ ದಾಟಬಹುದು. ಈ ಮಟ್ಟವನ್ನು ಮತ್ತೊಮ್ಮೆ ತಲುಪಿದ ಬಳಿಕ ನಿಫ್ಟಿಯ ಮುಂದಿನ ಮೇಲ್ಮುಖ ಹಾದಿ ಸುಗಮವಾಗಿ ಆಗಬಹುದು ಎನ್ನುವುದು ಆನಂದ್ ಜೇಮ್ಸ್ ಅಭಿಪ್ರಾಯ.

ಜೆನ್ಸಾಲ್ ಷೇರು ಖರೀದಿಗೆ ಸೂಕ್ತ ಸಮಯವಾ?

ಜೆನ್ಸಾಲ್ ಎಂಜಿನಿಯರಿಂಗ್ ಕಂಪನಿಯ ಷೇರು ಬೆಲೆ ಇತ್ತೀಚಿನ ದಿನಗಳಿಂದ ಪ್ರಪಾತಕ್ಕೆ ಬೀಳುತ್ತಿದೆ. ಇಷ್ಟು ತೀವ್ರ ಕುಸಿತದಲ್ಲಿರುವ ಷೇರನ್ನು ಮುಟ್ಟಬಾರದು ಎನ್ನುವ ಜಾಣ್ನುಡಿ ಷೇರುಮಾರುಕಟ್ಟೆಯಲ್ಲಿದೆ. ಆದರೆ, ಆನಂದ್ ಜೇಮ್ಸ್ ಅವರು ಈ ಷೇರಿಗೆ ಥಂಬ್ಸ್ ಅಪ್ ನೀಡಿದ್ದಾರೆ. ಶುಕ್ರವಾರ ಈ ಷೇರು ಬೆಳವಣಿಗೆ ಸ್ವರೂಪ ಗಮನಿಸಿದರೆ ಇದು ತಿರುಗಿ ಮೇಲೇರುವ ಸಾಧ್ಯತೆ ದಟ್ಟವಾಗಿದೆಯಂತೆ. ಸದ್ಯ 305 ರೂನಲ್ಲಿರುವ ಜೆನ್ಸಾಲ್ ಷೇರು ಬೆಲೆ 352 ರೂ ದಾಟಿದರೆ ನಂತರ ಸರಾಗವಾಗಿ ಮುಂದಡಿ ಇಡಬಲ್ಲುದು ಎನ್ನುತ್ತಾರೆ ಜೇಮ್ಸ್.

ಇಪಿಎಲ್ ಷೇರು ಖರೀದಿಸಬಹುದಾ?

ಎಕನಾಮಿಕ್ ಟೈಮ್ಸ್​​ಗೆ ನೀಡಿದ ಸಂದರ್ಶನದಲ್ಲಿ ಆನಂದ್ ಜೇಮ್ಸ್ ಅವರು ಇಪಿಎಲ್ ಷೇರು ಖರೀದಿಸಬಹುದು ಎಂದಿದ್ದಾರೆ. ಮುಂಬೈ ಮೂಲದ ಟ್ಯೂಬ್ ಪ್ಯಾಕೇಜಿಂಗ್ ಕಂಪನಿಯಾದ ಇಪಿಎಲ್​ನ ಷೇರುಬೆಲೆ ಸದ್ಯ 205 ರೂನಲ್ಲಿದೆ. ಇದರ ಟಾರ್ಗೆಟ್ ಪ್ರೈಸ್ 225 ಎಂದು ಅಂದಾಜಿಸಲಾಗಿದೆ. ಅಂದರೆ, ಒಂದು ತಿಂಗಳಲ್ಲಿ ಶೇ. 10ರಷ್ಟು ಬೆಳವಣಿಗೆ ನಿರೀಕ್ಷಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries