ಇಂದಿನ ಯುಗದಲ್ಲಿ WhatsApp ಮಾನವನ ಜೀವನದ ಒಂದು ಭಾಗವಾಗಿದೆ. ನಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಕಚೇರಿ ಕೆಲಸಗಳಿಗೆ WhatsApp ಬಳಕೆ ಅನಿವಾರ್ಯವಾಗಿದೆ. ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಸೆಕೆಂಡುಗಳಲ್ಲಿ ಹಂಚಿಕೊಳ್ಳಲು ಈ ಅಪ್ಲಿಕೇಶನ್ ತುಂಬಾ ಉಪಯುಕ್ತವಾಗಿದೆ.
ಪ್ರಸ್ತುತ ವಿಶ್ವಾದ್ಯಂತ 300 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದಾರೆ. ನಮ್ಮ ಭಾರತ ದೇಶದಲ್ಲಿ ಸುಮಾರು 54 ಕೋಟಿ ಜನರು ಈ ಆಪ್ ಬಳಸುತ್ತಿದ್ದಾರೆ.
1.9 ಬಿಲಿಯನ್ ಜನರು ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ. ಆದರೆ 97% ದಷ್ಟು ಜನರಿಗೆ ಇದರ ವಿಶೇಷ ಫೀಚರ್ಸ್ ಗೊತ್ತೇ ಇಲ್ಲ.
ನಿಮ್ಮ ಫೋನ್ ಕಳೆದುಹೋದಾಗಲೂ ಕೂಡ ನಿಮ್ಮ ಚಾಟ್ ಸೆಕ್ಯೂರ್ ಆಗಿರಬೇಕು ಅಂದ್ರೆ ಪಾಸ್‌ಕೋಡ್, ಫಿಂಗರ್‌ಪ್ರಿಂಟ್, ಫೇಸ್ ಐಡಿ ಬಳಸಿ ಲಾಕ್ ಮಾಡಿ. ಎರಡು ವಾಟ್ಸಪ್ ಖಾತೆಯನ್ನು ಬಳಸಬಹುದು. ಕೆಲಸ ಹಾಗೂ ವೃತ್ತಿ ಜೀವನಕ್ಕೆಂದು ನೀವು ಸಪರೇಟ್ ಆಗಿ ಎರಡು ವಾಟ್ಸಪ್ ಮಾಡಿಕೊಳ್ಳಬಹುದು.
ಡಿಲಿಟ್ ಆಗಿರುವ ಮೆಸೇಜ್‌ನ್ನು ಕೂಡ ನೀವು ರೀಸ್ಟೋರ್ ಮಾಡಬಹುದು. deleted for everyone ಅಂತ ಇದ್ದಾಗಲೂ ಕೂಡ Undo Delete For Me ಬಳಸಿದಾಗ ಡಿಲಿಟ್ ಆಗಿರುವ ಮೆಸೇಜ್ ಕೂಡ ಸಿಗುವುದು.
ನಂಬರ್‌ನ್ನು ಹಾಕಿ, ದೇಶ ಆಯ್ಕೆ ಮಾಡಿ ತಕ್ಷಣವೇ ಮೆಸೇಜ್ ಮಾಡಬಹುದು. ಇನ್ನು ಫೋಟೋ ಕಳಿಸುವಾಗ Once View ಆಪ್ಶನ್ ಕೂಡ ಇರುವುದು.
ವಾಟ್ಸಪ್‌ನಲ್ಲಿ ಮೆಟಾ ಎಐ ಕೂಡ ಇದೆ. ಚಾಟ್‌ನಲ್ಲಿ ಎಐ ಹುಡುಕಿ, ಅಲ್ಲಿ ನಿಮಗೆ ಬೇಕಾದ ಸಲಹೆ, ಫೋಟೋಗಳನ್ನು ಪಡೆಯಬಹುದು. ಯಾವುದೇ ವಿಷಯದ ಬಗ್ಗೆ ಕೂಡ ಮಾಹಿತಿ ಸಿಗುವುದು.
ವಾಟ್ಸಪ್‌ನಲ್ಲಿ ಎಐ ಬಳಕೆ ಮಾಡಬಹುದು;. ಅಂದರೆ Hey Pat ಆಪ್ಶನ್ ಜೊತೆಯಲ್ಲಿ AI assistant ಆಪ್ಶನ್ ಬಳಸಿ. ಎಐ ವೆಬ್‌ಸೈಟ್‌ಗೆ ಹೋಗಿ, ವಾಟ್ಸಪ್‌ನಲ್ಲಿ ಚಾಟ್ ಮಾಡಿ, ಅಲ್ಲಿ ಎಐ ಬಳಕೆ ಮಾಡಿಕೊಳ್ಳಿ.