ನವದೆಹಲಿ: ಜಾಗತಿಕ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸೋಷಿಯಲ್ ಪ್ಲಾಟ್ಫಾರ್ಮ್ ( ಈ ಹಿಂದಿನ ಟ್ವಿಟರ್ )ಎಕ್ಸ್ ಜಾಗತಿಕ ಬಳಕೆದಾರರಿಗೆ ಸೋಮವಾರ ಕೆಲ ಕಾಲ ಭಾರೀ ಆಡಚರಣೆಯನ್ನುಂಟು ಮಾಡಿದೆ.
ಪ್ರಪಂಚದ್ಯಾಂತ ತಂತ್ರಜ್ನಾನ ಸ್ಥಗಿತಗಳನ್ನು ಪತ್ತೆ ಹಚ್ಚುವ ಡೌನ್ಡೆಕ್ಟರ್ ಪ್ರಕಾರ, ಇಂದು ಮಧ್ಯಾಹ್ನ 2.30ರ ಹೊತ್ತಿಗೆ ಎಕ್ಸ್ ವೇದಿಕೆ ಸ್ಥಗಿತಕ್ಕೆ ಸಂಬಂಧಪಟ್ಟಂತೆ 2,028 ದೂರುಗಳು ಬಂದಿವೆ ಎಂದು ಹೇಳಿದೆ.
ಹಲವಾರು ಬಳಕೆದಾರರು ಪುಟಗಳನ್ನು ಲೋಡ್ ಮಾಡಲು ಮತ್ತು ಟೈಮ್ ಲೈನ್ಗಳನ್ನು ರಿಪ್ರೇಶ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಈ ಕುರಿತು ಬಳಕೆದಾರೊಬ್ಬರಾದ @huzy14w ಹೆಸರಿನ ಖಾತೆದಾರೊಬ್ಬರ ' ಎಕ್ಸ್ ಒಂದು ಗಂಟೆಯಿಂದ ಕೆಲಸ ಮಾಡುತ್ತಿಲ್ಲ.ಆದರೆ, ಇದೀಗ ಸಮಸ್ಯೆ ಇಲ್ಲ ಎಂದು ಕಾಣುತ್ತಿಯೇ?' ಎಂದು ಬರೆದಿದ್ದಾರೆ. ಇನ್ನು ಇವರ ಫೋಸ್ಟ್ಗೆ ಹಲವರು ಪ್ರತಿಕ್ರಿಯಿಸಿದ್ದು, ಎಲ್ಲ ಸಮಸ್ಯೆ ಬಗ್ಗೆ ದೂರಿದ್ದಾರೆ.
ಆದ್ಯಾಗೂ ಜಾಗತಿಕ ಆಡಚರಣೆ ಉಂಟಾದ ಕೆಲ ಸಮಯದ ಬಳಿಕ ಎಕ್ಸ್ ಮತ್ತೆ ಸೇವೆ ಆರಂಭಿಸಿದೆ. ಆದರೆ, ಈ ಕುರಿತು ಎಕ್ಸ್ಗೆ ಸಂಬಂಧಿಸಿದ ಕಂಪನಿಯಾಗಲಿ ಅಥವಾ ಎಲಾನ್ ಮಸ್ಕ್ ಉತ್ತರಿಸಿಲ್ಲ ಎಂದು ವರದಿಯಾಗಿದೆ.
ಇನ್ನು 2022ರಲ್ಲಿ ಎಲಾನ್ ಮಸ್ಕ್ ಎಕ್ಸ್ ಸೋಷಿಯಲ್ ಫ್ಲಾಟ್ಫಾರಂ ಅನ್ನು 44 ಬಿಲಿಯಮ್ ಡಾಲರ್ಗೆ ಖರೀಸಿದ್ದಾರೆ. ಅಂದಿನಿಂದ ಟ್ವಿಟ್ವರ್ ಹೆಸರಿನಲ್ಲಿದ್ದ ಈ ಖಾತೆಯನ್ನು ಎಕ್ಸ್ ಎಂದು ಮರುನಾಮಕರಣ ಮಾಡಿದ್ದಾರೆ.