ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾ ಮಂದಿರದ 25ನೇ ವಾರ್ಷಿಕೋತ್ಸವ ವೇದಮೂರ್ತಿ ಪಾಂಡೇಲು ಶಿವಶಂಕರ ಭಟ್ಟರ ನೇತೃತ್ವದಲ್ಲಿ ಏಪ್ರಿಲ್ 12 ಶನಿವಾರ ಜರಗಲಿರುವುದು. ಪೂರ್ವಾಹ್ನ 8ಕ್ಕೆ ಶ್ರೀ ಗಣಪತಿ ಹೋಮ, ಭಜನೆ, 9.30ರಿಂದ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಶ್ರೀ ಸತ್ಯನಾರಾಯಣ ವ್ರತ ಕಥಾ, 10 ರಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಮತ್ತು ಬಳಗದವರಿಂದ ಹರಿಕಥೆ ಸಂಕೀರ್ತನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ. ಅಪರಾಹ್ನ 2 ರಿಂದ ವಿಷ್ಣು ಫ್ರೆಂಡ್ಸ್ ಬಾಂಜತ್ತಡ್ಕ ಪ್ರಾಯೋಜಕತ್ವದಲ್ಲಿ ಶ್ರೀ ಉದನೇಶ್ವರ ಭಜನಾ ಮಂಡಳಿ ಪೆರಡಾಲ ಇವರಿಂದ ಭಜನೆ, ಅಪರಾಹ್ನ 4ರಿಂದ ರಾಮ ಇಕ್ಕೇರಿ ಇವರಿಂದ ಭಾಗವತ ಪಾರಾಯಣ, ಸಂಜೆ 6ರಿಂದ ವೃಂದಾವನ ಮಹಿಳಾ ಭಜನಾ ಸಂಘ ಬಾಂಜತ್ತಡ್ಕ ಇವರಿಂದ ಭಜನೆ, 8.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ 9ಕ್ಕೆ ವಿಷ್ಣು ಫ್ರೆಂಡ್ಸ್ ಬಾಂಜತ್ತಡ್ಕ ಪ್ರಾಯೋಜಕತ್ವದಲ್ಲಿ ಎಸ್‍ಆರ್‍ಕೆ ನಾಟ್ಯಾಲಯ ಬಂಬ್ರಾಣ ಇವರಿಂದ ನೃತ್ಯ ಕಾರ್ಯಕ್ರಮ ಜರಗಲಿದೆ.