ಬದಿಯಡ್ಕ: ವಾಂತಿಚ್ಚಾಲ್ ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಪ್ರಾರ್ಥನಾ ಕೋಲ ಹಾಗೂ ಸುಮಂಗಲೀ ಮಾತೃಸಂಘದ ಉದ್ಘಾಟನೆ ಏ.13ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಬೆಳಗ್ಗೆ 6ಕ್ಕೆ ದೀಪಪ್ರತಿಷ್ಠೆ, ಭಂಡಾರ ಇಳಿಯುವುದು, 6.30ಕ್ಕೆ ಗಣಪತಿ ಹೋಮ, 7.30ಕ್ಕೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ, ವಿಶೇಷ ಅಲಂಕಾರ ತಂಬಿಲಸೇವೆ, 10.30ರಿಂದ ಮಾ. ಪವಿತ್ ಮಂಡೆಕಾಪು ಸೇವೆಯಲ್ಲಿ ಶ್ರೀ ಮಂತ್ರಮೂರ್ತಿ ಗುಳಿಗ ದೈವದ ಕೋಲ, 12.30ಕ್ಕೆ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ಅಭಿನಂದನಾ ಸನ್ಮಾನ ಸಮಾರಂಭ :
ಬೆಳಗ್ಗೆ 9.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀಕ್ಷೇತ್ರದ ಶ್ರೀ ಮಾತಾನಂದಮಯೀ ದೀಪಜ್ವಲನೆಗೈದು ಆಶೀರ್ವಚನ ನೀಡಲಿರುವರು. ಉದ್ಯಮಿ ಶಿವಶಂಕರ ನೆಕ್ರಾಜೆ ಅಧ್ಯಕ್ಷತೆ ವಹಿಸಲಿರುವರು. ಇದೇ ವೇಳೆ ಸಮಾಜ ಸೇವೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಕೊಡುಗೈದಾನಿ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸೇವಾಟ್ರಸ್ಟ್‍ನ ಅಧ್ಯಕ್ಷ ಕುಳೂರು ಡಾ. ಸದಾಶಿವ ಶೆಟ್ಟಿ ಕನ್ಯಾನ ಇವರಿಗೆ ಅಭಿನಂದನೆ ನಡೆಯಲಿದೆ. ಕರ್ನಾಟಕ ಸರ್ಕಾರ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಸಿ.ಶ್ರೀನಿವಾಸ್, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಉದ್ಯಮಿ ಹೇಮಂತ್ ಕುಮಾರ್ ಕಂಬಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ ಅವರಿಗೆ ಯಕ್ಷಕುರಲ್ ಪ್ರಶಸ್ತಿ ಪ್ರಧಾನ ಈ ಸಂದರ್ಭದಲ್ಲಿ ನಡೆಯಲಿರುವುದು. ಉಪ್ಲೇರಿ ಸೇವಾಟ್ರಸ್ಟ್ನ ನಿರ್ದೇಶಕ ಡಾ. ಶ್ರೀನಿಧಿ ಸರಳಾಯ ಅಭಿನಂದನಾ ಭಾಷಣ ಮಾಡಲಿರುವರು. ನವೋದಯ ಕಾಲೇಜು ಸುಳ್ಯದ ಪ್ರಾಧ್ಯಾಪಕ ಶ್ರೀಧರ್ ವಿ., ಧಾರ್ಮಿಕ ಮುಂದಾಳು ವಿಜಯಕುಮಾರ್ ನಡುಗಲ್ಲು ಸುಬ್ರಹ್ಮಣ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಗ್ರಾಮಪಂಚಾಯಿತಿ ಸದಸ್ಯ ಈಶ್ವರ ಮಾಸ್ತರ್ ಪೆರಡಾಲ, ಸೇವಾಟ್ರಸ್ಟ್ ಉಪ್ಲೇರಿ ನಿರ್ದೇಶಕ ಜಗನ್ನಾಥ ರೈ ಕೊರೆಕ್ಕಾನ, ಗೌರವ ಸಲಹೆಗಾರ ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ಸಮಂಗಲೀ ಮಾತೃಸಂಘದ ಅಧ್ಯಕ್ಷೆ ರೋಹಿಣಿ ಅಚ್ಚಾಯಿ ಉಪಸ್ಥಿತರಿರುವರು. ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಮಾತೃಸಂಘದ ಕಾರ್ಯದರ್ಶಿ ಸುಪ್ರಿತಾ ವಾಂತಿಚ್ಚಾಲು, ಜಯಮಣಿಯಂಪಾರೆ, ಬಬಿತ ಕಾವೂರು ಕಾರ್ಯಕ್ರಮ ನಿರ್ವಹಣೆ ಮಾಡಲಿರುವರು.
ಆಮಂತ್ರಣ ವಿತರಣೆ:
ಕಾರ್ಯಕ್ರಮದ ಆಮಂತ್ರಣ ವಿತರಣೆಯ ಅಂಗವಾಗಿ ಒಡಿಯೂರು ಕ್ಷೇತ್ರಕ್ಕೆ ಭೇಟಿ ನೀಡಲಾಯಿತು.
ಉಪ್ಲೇರಿ ಶ್ರೀ ಸುಮಂಗಲಿ ಮಾತೃ ಸಂಘದ ಉದ್ಘಾಟನೆಗೈಯಲಿರುವ ಶ್ರೀ ಮಾತಾನಾಂದಮಯಿ ಇವರನ್ನು ಆಮಂತ್ರಿಸಲಾಯಿತು. ಶ್ರೀಕ್ಷೇತ್ರದ ಶ್ರೀ ಗುರುದೇವನಾಂದ ಸ್ವಾಮೀಜಿ ಅನುಗ್ರಹ ನೀಡಿ ಹರಿಸಿದರು. ಶ್ಯಾಮಲಾ ವಾಂತಿಚ್ಚಾಲು, ಚಂದ್ರಾವತಿ ಕುಂಟಾಲುಮೂಲೆ, ರೇಖಾ ಬೈಕುಂಜೆ ಮತ್ತು ಗೋಪಾಲಕೃಷ್ಣ ವಾಂತಿಚ್ಚಾಲು ಜೊತೆಗಿದ್ದರು.