ಮುಂಜಾನೆ 4.02ರವರೆಗೆ ಕಲಾಪ ನಡೆದು ಅದೇ ದಿನ 11 ಗಂಟೆಗೆ ಮತ್ತೆ ಕಲಾಪ ಆರಂಭವಾಗಲಿದೆ' ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಹೇಳಿದರು.
ಗುರುವಾರ ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾಯಿತು. ನಿಗದಿಯಂತೆ ಮೊದಲು ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ಅವಧಿ ನಡೆಯಿತು.
ಮಧ್ಯಾಹ್ನ 1 ಗಂಟೆಗೆ ವಕ್ಫ್ ತಿದ್ದುಪಡಿ ಕಾಯ್ದೆ-2025 ಅನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಶುಕ್ರವಾರ ನಸುಕಿನ 2.30ಕ್ಕೆ ಅಂಗೀಕಾರ ನೀಡಿತು. ಮಸೂದೆಯ ಪರವಾಗಿ 128 ಮಂದಿ, ವಿರುದ್ಧವಾಗಿ 95 ಮಂದಿ ಮತ ಚಲಾಯಿಸಿದರು.
ಇದಾದ ಬಳಿಕ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ನಿರ್ಣಯವನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಿದರು. ಇದಕ್ಕೆ ರಾಜ್ಯಸಭೆ ಒಪ್ಪಿಗೆ ನೀಡಿತು.