ಗುವಾಹಟಿ: ಮನೆಯ ಎರಡನೇ ಮಹಡಿಯಿಂದ ಜಿಗಿದು ಅಸ್ಸಾಂನ ಮಾಜಿ ಗೃಹ ಸಚಿವ ದಿವಂಗತ ಭೃಗು ಕುಮಾರ ಅವರ ಏಕೈಕ ಪುತ್ರಿ ಉಪಾಸನಾ ಫುಕನ್(28) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
'ಉಪಾಸನಾ ಅವರನ್ನು ತಕ್ಷಣ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ' ಎಂದು ಅವರು ಹೇಳಿದ್ದಾರೆ.
'ಪ್ರಾಥಮಿಕ ತನಿಖೆಯಲ್ಲಿ ಉಪಾಸನಾ ಅವರು ದೀರ್ಘಕಾಲದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎಂಬುವುದು ತಿಳಿದುಬಂದಿದೆ' ಎಂದು ಅವರು ತಿಳಿಸಿದ್ದಾರೆ.
'ಈ ಹಿಂದೆಯೂ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಭಾನುವಾರ ಅವರ ತಾಯಿ ಮನೆಗೆಲಸದಲ್ಲಿ ನಿರತರಾಗಿದ್ದಾಗ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
1985ರಲ್ಲಿ ಎಜಿಪಿ(ಅಸ್ಸಾಂ ಗಣ ಪರಿಷತ್) ಸರ್ಕಾರದಲ್ಲಿ ಭೃಗು ಕುಮಾರ ಫುಕನ್ ಅವರು ಗೃಹ ಸಚಿವರಾಗಿದ್ದರು. 2006ರಲ್ಲಿ ನಿಧರಾದರು.