ವಾಷಿಂಗ್ಟನ್: ತನ್ನ ದೇಶಕ್ಕೆ ಬರುವ ಇತರ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಪ್ರತೀಕಾರ ಸುಂಕ, ಅಕ್ರಮವಾಗಿ ದೇಶ ಪ್ರವೇಶಿಸಿದವರ ಗಡೀಪಾರು ನಿರ್ಧಾರದಿಂದಾಗಿ ಅಮೆರಿಕದಲ್ಲಿ ಮಾರ್ಚ್‌ನಲ್ಲಿ 2.28 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ವರದಿಯಾಗಿದೆ.
ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದೂ ಒಳಗೊಂಡು ಅಮೆರಿಕನ್ನರಿಗೆ ಮರಳಿ ಸ್ವಾತಂತ್ರ್ಯ ತಂದುಕೊಡಲು ನಾನು ಬದ್ಧ ಎಂದು ಚುನಾವಣಾ ಪೂರ್ವದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಅಧ್ಯಕ್ಷರಾಗುತ್ತಿದ್ದಂತೆ ಅಕ್ರಮ ವಲಸಿಗರ ಗಡೀಪಾರಿಗೆ ಆದೇಶಿಸಿದರು. ಇದರ ಭಾಗವಾಗಿ ಭಾರತ 600ಕ್ಕೂ ಹೆಚ್ಚು ಜನರು ಸ್ವದೇಶಕ್ಕೆ ಮರಳಿದರು. ಅದರಂತೆಯೇ ಇತರ ರಾಷ್ಟ್ರಗಳ ಅಕ್ರಮ ವಲಸಿಗರನ್ನೂ ಪತ್ತೆ ಮಾಡಿ, ಅವರವರ ದೇಶಕ್ಕೆ ಅಮೆರಿಕ ಕಳುಹಿಸಿದೆ.
ಇದರ ಪರಿಣಾಮವಾಗಿ ದೇಶದ ನಿರುದ್ಯೋಗ ಪ್ರಮಾಣ ಶೇ 4.2ಕ್ಕೆ ಕುಸಿದಿದೆ. ಫೆಬ್ರುವರಿಯಲ್ಲಿ ನೇಮಕಾತಿ ಪ್ರಮಾಣವು 1.17 ಲಕ್ಷ ಇತ್ತು. ಇದು 1.30ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದರು. ಆದರೆ 2.28 ಲಕ್ಷಕ್ಕೆ ಏರಿಕೆಯಾಗಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.