ಉಜ್ಜಯಿನಿ: ಮಧ್ಯ ಪ್ರದೇಶದಲ್ಲಿ ಧಾರ್ಮಿಕ ಸಂಸ್ಥೆಯ ಸಿಬ್ಬಂದಿಯೊಬ್ಬರನ್ನು "ಅಕ್ರಮ ಹಣ ವರ್ಗಾವಣೆ" ಆರೋಪದ ಮೇಲೆ ಸೈಬರ್ ವಂಚಕರು "ಡಿಜಿಟಲ್ ಅರೆಸ್ಟ್" ಮೂಲಕ 26 ದಿನಗಳಲ್ಲಿ 2.5 ಕೋಟಿ ರೂ. ವರ್ಗಾಯಿಸಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಸಂಬಂಧ ಉಜ್ಜಯಿನಿ ಜಿಲ್ಲೆಯಲ್ಲಿ ಖಾಸಗಿ ಬ್ಯಾಂಕಿನ ಇಬ್ಬರು ಉದ್ಯೋಗಿಗಳು ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ.
ಗ್ವಾಲಿಯರ್‌ನ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಸುಪ್ರದಿಪ್ತಾನಂದ ಅವರು ಏಪ್ರಿಲ್ 16 ರಂದು ತಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಗ್ವಾಲಿಯರ್ ಅಪರಾಧ ವಿಭಾಗದ ಅಧಿಕಾರಿಗಳು ನಾಗ್ಡಾ ಮತ್ತು ಉಜ್ಜಯಿನಿಯಲ್ಲಿನ ಸ್ಥಳಗಳ ಮೇಲೆ ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಂಧಿತ ಆರೋಪಿಗಳು ಆನ್‌ಲೈನ್ ವಂಚನೆ ಜೊತೆಗೆ, ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ನೀಡುವುದು, ನಕಲಿ ಸಿಮ್ ಕಾರ್ಡ್‌ಗಳನ್ನು ವಿತರಿಸುವುದು ಮತ್ತು ಜನರನ್ನು ವಂಚಿಸಲು ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವುದರಲ್ಲಿ ಭಾಗಿಯಾಗಿದ್ದಾರೆ ಎಂದು ನಾಗ್ಡಾ ಪೊಲೀಸ್ ಠಾಣೆಯ ಉಸ್ತುವಾ