ಬದಿಯಡ್ಕ: ಮಾನ್ಯ ಸಮೀಪದ ಕಜಳ ಶ್ರೀಚಾಮುಂಡೇಶ್ವರಿ ಮತ್ತು ಕಲ್ಲುರ್ಟಿ ಅಮ್ಮನವರ ದೈವಸ್ಥಾನದ 35ನೇ ವಾರ್ಷಿಕೋತ್ಸವ ತಂತ್ರಿವರ್ಯ ಅನಂತಪದ್ಮನಾಭ ತುಂಗ ಭಟ್ ಅವರ ನೇತೃತ್ವದಲ್ಲಿ ಏ.26 ರಂದು ಶನಿವಾರ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 6ಕ್ಕೆ ದೀಪ ಪ್ರಜ್ವಲನೆ, 7 ರಿಂದ ಗಣಪತಿಹೋಮ, 8ಕ್ಕೆ ಪೂಜೆ, 8 ರಿಂದ ವಿವಿಧ ತಂಡಗಳಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 6 ರಿಂದ ದುರ್ಗಾಪೂಜಾರಂಭ, 6.15 ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಬಳಿಕ 7 ರಿಂದ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ವಾಮನ ನಾಯ್ಕ ಅರಂತೋಡು ಅಧ್ಯಕ್ಷತೆ ವಹಿಸುವರು. ವಿದ್ಯುತ್ ಇಲಾಖೆ ನಿರ್ದೇಶಕ ಸುರೇಂದ್ರ ಪಿ.ಉದ್ಘಾಟಿಸುವರು. ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ಪಿ., ಕಾನೂನು ಮಾಪನ ಶಾಸ್ತ್ರದ ಇನ್ಸ್‍ಫೆಕ್ಟರ್ ಶಶಿಕಲಾ ಸುಬ್ರಹ್ಮಣ್ಯ, ಶಿಕ್ಷಕಿ ಲೀಲಾ ಟೀಚರ್, ಕಲ್ಲಕಟ್ಟ ಶಾಲಾ ವ್ಯವಸ್ಥಾಪಕ ಪಿ.ವಿ.ಕೇಶವ, ನಿವೃತ್ತ ರೈಲ್ವೇ ಅಧಿಕಾರಿ ಐತ್ತಪ್ಪ ನಾಯ್ಕ ಮರ್ದಂಬೈಲು, ಧಾರ್ಮಿಕ ಮುಂದಾಳು ಗಣೇಶ ಪಾರೆಕಟ್ಟೆ, ಗ್ರಾ.ಪಂ.ಸದಸ್ಯ ಕೆ.ಶ್ಯಾಮಪ್ರಸಾದ ಮಾನ್ಯ, ಉದ್ಯಮಿ ರಾಮ ಕಾರ್ಮಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ವಿವಿಧ ವಲಯಗಳ ಪ್ರಮುಖ ಸಾಧಕರಾದ ಹಂಪಿ ಕನ್ನಡ ವಿವಿಯ ನಿವೃತ್ತ ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ನಿವೃತ್ತ ವಾಯುಸೇನಾಧಿಕಾರಿ ಪಜ್ಜ ತಿರುಮಲೇಶ್ವರ ಭಟ್ ಹಾಗೂ ಕೃಷ್ಣ ನಾಯ್ಕ ನೀರ್ಚಾಲು, ನಿವೃತ್ತ ಅಂಚೆ ಅಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ, ಪ್ರಾಧ್ಯಾಪಕಿ ಮಾಲತಿ ನಾರಾಯಣ ಎಡನೀರು ಅವರನ್ನು ಸನ್ಮಾನಿಸಲಾಗುವುದು. ಕಣ್ಣೂರು ವಿ.ವಿ.ಸೆನೆಟ್ ಸದಸ್ಯ, ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಸನ್ಮಾನಿಸುವರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಅಭಿನಂದನಾ ಭಾಷಣ ಮಾಡುವರು.
ರಾತ್ರಿ 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ಹಾಗೂ ನೃತ್ಯ ಕಾರ್ಯಕ್ರಮದ ಮುಂದುವರಿಕೆ ನಡೆಯಲಿದೆ.