ಕಾಸರಗೋಡು : ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕೃತಿ ಉತ್ಸವ ಮೇ 3ರಂದು ಬೆಳಗ್ಗೆ 9ರಿಂದ ಕಾಸರಗೋಡು ಸೀತಾಂಗೊಳಿಯ ಅಲಯನ್ಸ್ ಸಭಾಭವನದಲ್ಲಿ ಜರಗಲಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಎಂಬಿವುಗಳ ಸಂಯುಕ್ತ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಸೀತಾಂಗೋಳಿಯ ಕ್ಲಬ್ ಕಚೇರಿಯಲ್ಲಿ ಜರುಗಿತು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಪುತ್ತಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಯಂತ ಪಾಟಾಳಿ, ಧಾರ್ಮಿಕ-ಸಾಮಾಜಿಕ ಮುಖಂಡ ರಾಮಪ್ಪ ಮಂಜೇಶ್ವರ, ಮಹಾಲಿಂಗ ಕೆ, ಅಪ್ಪಣ್ಣ ಸೀತಾoಗೋಳಿ, ಕೃಷ್ಣದಾಸ್ ಡಿ, ಮಾನ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ವಕೀಲ ಥಾಮಸ್ ಡಿ' ಸೋಜಾ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ವಂದಿಸಿದರು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಸಾಮಾಜಿಕ-ಧಾರ್ಮಿಕ ಮುಂದಾಳು, ಉದ್ಯಮಿ ಕೆ. ಕೆ. ಶೆಟ್ಟಿ ಕುತ್ತಿಕ್ಕಾರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉದ್ಯಮಿ ಶಿವಶಂಕರ ನೆಕ್ರಾಜೆ ಕಾರ್ಯಾಧ್ಯಕ್ಷರು, ಸುಕುಮಾರ ಕುದ್ರೆಪ್ಪಾಡಿ, ಜಯಂತ ಪಾಟಾಳಿ, ಡಿ. ಶಂಕರ ಉಪಾಧ್ಯಕ್ಷರು, ವಕೀಲ ಥಾಮಸ್ ಡಿ' ಸೋಜಾ ಪ್ರಧಾನ ಸಂಚಾಲಕ, ರಾಮಪ್ಪ ಮಂಜೇಶ್ವರ, ಕೃಷ್ಣದಾಸ್ ಡಿ ಸಂಚಾಲಕರು, ಶ್ರೀಕಾಂತ್ ನೆಟ್ಟಣಿಗೆ ಕೋಶಾಧಿಕಾರಿ, ಎ. ಆರ್. ಸುಬ್ಬಯ್ಯಕಟ್ಟೆ, ಪೆÇ್ರ. ಶ್ರೀನಾಥ್ ಹಣಕಾಸು ಸಮಿತಿ ಸಂಚಲಕರು, ಮಹಾಲಿಂಗ. ಕೆ ಆಹಾರ, ಅಪ್ಪಣ್ಣ ಸೀತಾoಗೋಳಿ, ಪವನ್ ಶೋಭಯಾತ್ರೆ, ರವಿ ನಾಯ್ಕಾಪು, ಗಂಗಾಧರ ಯಾದವ್, ರಾಜೇಶ್ ಕುದ್ರೆಪ್ಪಾಡಿ ವೇದಿಕೆ, ಅಖಿಲೇಶ್ ನಗುಮುಗಮ್, ಪುರುಷೋತ್ತಮ ಭಟ್, ರತನ್ ಹೊಸಂಗಡಿ, ಜಾನ್ ಡಿ' ಸೋಜಾ ಕಯ್ಯಾರು ಪ್ರಚಾರ, ರಚನಾ ಸಂಸ್ಥೆ ಕುದ್ರೆಪ್ಪಾಡಿ ಅಲಂಕಾರ, ರವಿ ನಾಯ್ಕಾಪು, ಶೋಭಿತ್ ಸಾಂಸ್ಕೃತಿಕ, ರಂಜಿತ್, ಸತೀಶ್ ಸ್ವಯಂ ಸೇವಕ ಮತ್ತು ಶಿಸ್ತು ಹಾಗೂ ಮಾನ ಮಾಸ್ಟರ್ ಅವರನ್ನು ಸ್ವಾಗತ ಕೌಂಟರ್ ಸಂಚಲಕರನ್ನಾಗಿ ಆಯ್ಕೆ ಮಾಡಲಾಯಿತು. ಧರ್ಮಸ್ಥಳ ಸ್ವ ಸಹಾಯ ಸಂಘ, ಶೌರ್ಯ ಘಟಕ, ಸಂತೋಷ್ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್, ರಚನಾ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್, ವಿವಿಧ ಕುಟುಂಬಶ್ರೀ ಘಟಕಗಳನ್ನು ವಿವಿಧ ಸಮಿತಿಗಳಲ್ಲಿ ಒಳಪಡಿಸಲಾಯಿತು.