ಹೀಗಿರುವಾಗ ಯಾವುದಾದರು ದೇಶದಲ್ಲಿ ಪೊಲೀಸ್ ಹಾಗೂ ಆರ್ಮಿ ಎರಡೂ ಸಹ ಇಲ್ಲದೆ ಇರುವುದನ್ನು ಊಹಿಸುವುದು ನಿಮಗೆ ಕಷ್ಟವಾಗಬಹುದು. ಆದ್ರೆ ಪ್ರಪಂಚದ ಬೆರಳೆಣಿಕೆಯ ದೇಶಗಳಲ್ಲಿ ಆರ್ಮಿ ಹಾಗೂ ಪೊಲೀಸ್ ಈ ಎರಡು ವ್ಯವಸ್ಥೆ ಇಲ್ಲವೇ ಇಲ್ಲ. ಆ ದೇಶಗಳು ಶಾಂತಿಯನ್ನು ಕಾಪಾಡುವ ದೃಷ್ಟಿಯಿಂದ ಹಾಗೆ ದೇಶದ ಸುರಕ್ಷತೆಗೆ ಪೊಲೀಸ್ ಹಾಗೂ ಸೇನೆಯ ಅವಶ್ಯಕತೆ ಇಲ್ಲ ಎಂಬುದನ್ನು ಸಾಬೀತುಪಡಿಸಿವೆ.
ಇತ್ತೀಚಿಗೆ ಬಹುತೇಕ ರಾಷ್ಟ್ರಗಳು ತಮ್ಮ ಆದಾಯದ ಬಹುತೇಕ ಭಾಗವನ್ನು ಮಿಲಿಟರಿ ಪಡೆಯ ಬಲಗೊಳಿಸುವ ಉದ್ದೇಶದಿಂದ ಬಳಸುತ್ತಿರುವುದು ನೋಡಬಹುದು. ಹಾಗೆ ಅಷ್ಟೊಂದು ಅನುದಾನದ ಬಳಕೆಯ ಬಳಿಕವು ದೇಶದಲ್ಲಿ ಅಪರಾಧ, ಗಡಿ ಸಮಸ್ಯೆಗಳ ಎದುರಿಸುತ್ತಿರುವುದು ಕೂಡ ಸಾಮಾನ್ಯ. ಆದ್ರೆ ಈ ಮೂರು ದೇಶಗಳು ಪೊಲೀಸ್ ವ್ಯವಸ್ಥೆಯನ್ನೇ ಹೊಂದಿಲ್ಲ. ಅಲ್ಲಿ ಗಡಿಗಳಿಲ್ಲ, ಗಡಿಯಲ್ಲಿ ಆರ್ಮಿಯೂ ಇಲ್ಲ. ಆದರೆ ಈ ದೇಶಗಳು ಇಂದಿಗೂ ಸುರಕ್ಷಿತ. ಹಾಗಾದ್ರೆ ಪೊಲೀಸ್, ಆರ್ಮಿ ಇಲ್ಲದ ಮೂರು ದೇಶಗಳು ಯಾವುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜಾಗತಿಕ ಶಾಂತಿಯುವ ದೇಶಗಳಲ್ಲಿ ಪಟ್ಟಿಯಲ್ಲಿ ಈ ಮೂರು ದೇಶಗಳಿವೆ. ಅಲ್ಲಿ ಪೊಲೀಸ್ ವ್ಯವಸ್ಥೆ ಇಲ್ಲದಿದ್ದರೂ ಈ ದೇಶಗಳು ಇಂದಿಗೂ ಶಾಂತಿಯತ ದೇಶ. ಹಾಗೆ ಅಲ್ಲಿ ಅಪರಾಧ ಕೂಡ ಕಡಿಮೆ, ಹಾಗಾದ್ರೆ ಆ ದೇಶಗಳು ಯಾವುದು ಗೊತ್ತಾ?
ಐಸ್‌ಲ್ಯಾಂಡ್:
ಐಸ್‌ಲ್ಯಾಂಡ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ನೆಲೆಯಾಗಿರುವ ಪುಟ್ಟ ರಾಷ್ಟ್ರ. ಐಸ್‌ಲ್ಯಾಂಡ್ ಪರ್ವತ ಶ್ರೇಣಿಗಳು, ಪ್ರವಾಸಿ ತಾಣಗಳಿಂದ ಹೆಸರಾಗಿದೆ. ಇದು ನ್ಯಾಟೋ ಸದಸ್ಯ ರಾಷ್ಟ್ರವಾಗಿದೆ. NATO, ಅಥವಾ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ, ಯುರೋಪಿಯನ್ ಮತ್ತು ಉತ್ತರ ಅಮೆರಿಕಾದ ದೇಶಗಳ ನಡುವಿನ ಮಿಲಿಟರಿ ಮೈತ್ರಿಕೂಟವಾಗಿದೆ. ಇಲ್ಲಿ ದೇಶದ ತನ್ನದೇ ಸ್ವಂತ ಮಿಲಿಟರಿ ಪಡೆ ಹೊಂದಿರುವುದಿಲ್ಲ, ಬದಲಿಗೆ ಅಗತ್ಯವಿದ್ದಾಗ ನ್ಯಾಟೋ ಸಹಾಯಕ್ಕೆ ಬೇಡಿಕೆ ಇಡಲಿದೆ. ದೇಶವು ಬಲವಾದ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೊಂದಿದೆ. ಮಹಿಳೆಯರು ರಾತ್ರಿಯಲ್ಲಿ ಒಂಟಿಯಾಗಿ ಓಡಾಡುವಷ್ಟು ಸುರಕ್ಷಿತ ದೇಶವಿದು. ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಐಸ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಅಲ್ಲಿ ಸಣ್ಣ ಪುಟ್ಟ ಕಳ್ಳತನ ಪ್ರಕರಣ ವರದಿಯಾಗಿರುವುದು ಬಿಟ್ಟರೆ ದೊಡ್ಡ ಕೃತ್ಯಗಳು ನಡೆಯುವುದಿಲ್ಲ.
ಲಿಚ್ಟೆನ್‌ಸ್ಟೈನ್ :
ಲಿಚ್ಟೆನ್‌ಸ್ಟೈನ್ ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ನೆಲೆಗೊಂಡಿರುವ ಒಂದು ಸಣ್ಣ ಯುರೋಪಿಯನ್ ರಾಷ್ಟ್ರವಾಗಿದೆ. ದೇಶದ ಬಹುತೇಕ ಆದಾಯವು ಮಿಲಿಟರಿ ಸುಧಾರಣೆಗೆ ವ್ಯಯಿಸಲಾಗುತ್ತಿದೆ ಎಂದು ತಿಳಿದು 1868ರಲ್ಲೇ ದೇಶದಲ್ಲಿ ಮಿಲಿಟರಿಯನ್ನು ಬಂದ್ ಮಾಡಲಾಗಿದೆ. ಹಾಗೆ ಲಿಚ್ಟೆನ್‌ಸ್ಟೈನ್ ವಿಶ್ವದ ಯಾವುದೇ ಯುದ್ಧದಲ್ಲಿ ಭಾಗಿಯಾಗಿಲ್ಲ ಹಾಗೆ ಯಾವುದೇ ದೇಶದ ಪರವಾಗಿಯೂ ತನ್ನ ಬೆಂಬಲ ಸೂಚಿಸುವುದಿಲ್ಲ. ತುರ್ತು ಸಂದರ್ಭದಲ್ಲಿ ಸ್ವಿಟ್ಜರ್ಲೆಂಡ್ ದೇಶದ ಮೊರೆ ಹೋಗಲಿದೆ. ಆದರೆ ಪ್ರವಾಸಿಗರ ಭದ್ರತೆಗಾಗಿ ಬೆರಳೆಣಿಕೆಯ ಭದ್ರತಾ ಸಿಬ್ಬಂದಿಯನ್ನು ಹೊಂದಿದೆ.
ವಿಶ್ವದ ಅತ್ಯಂತ ಚಿಕ್ಕ ದೇಶವಾಗಿರುವ ವ್ಯಾಟಿಕನ್ ಸಿಟಿ ಯಾವುದೇ ಆರ್ಮಿ ಹೊಂದಿಲ್ಲ. ಆದ್ರೆ ಪೋಪ್ ಅವರ ಭದ್ರತೆಗಾಗಿ ಸ್ವಿಸ್ ಗಾರ್ಡ್ ಭದ್ರತಾ ಪಡೆ ಹೊಂದಿದೆ. ಹಾಗೆ ಈ ದೇಶಕ್ಕೆ ಇಟಲಿ ಪೊಲೀಸರು ಮತ್ತು ಮಿಲಿಟರಿಯ ಬೆಂಬಲವಿದೆ. ಇಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ತೀರ ಕಡಿಮೆ. ಹಾಗೆ ಫ್ರಾನ್ಸ್ ಬಳಿ ಇರುವ ಮೊನಾಕೋ ಸಹ ಆರ್ಮಿ ಹಾಗೂ ಪೊಲೀಸ್ ಹೊಂದಿಲ್ಲ. ಇದು ಫ್ರೆಂಚ್ ಭದ್ರತೆಯ ಬೆಂಬಲ ಪಡೆಯಲಿದೆ.