ಮಂಜೇಶ್ವರ : ಕಾಸರಗೋಡು ಜಿಲ್ಲಾಕುಲಾಲ ಸಂಘ ಮಂಜೇಶ್ವರ ತೂಮಿನಾಡು ಇದರ ಆಶ್ರಯದಲ್ಲಿ ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ ಯೋಜನೆಯ 5 ನೇ ಕುಲಾಲ ಸಹಾಯ ಹಸ್ತ 15,000 ರೂ. ಮೊತ್ತವನ್ನು ಕುಂಬಳೆ ಪಂಚಾಯತಿ ಕುಲಾಲ ಸಂಘ ಕುಂಬಳೆ ಶಾಖೆಗೊಳಪಟ್ಟ ಶಿವಪ್ಪ ಮೂಲ್ಯ ಪುಣಿಯೂರು ಅವರ ಚಿಕಿತ್ಸೆಗಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಕುಲಾಲ ಸಂಘ ಕುಂಬಳೆ ಶಾಖೆಯ ಮಾಜಿ ಅಧ್ಯಕ್ಷ ಶ್ರೀನಿವಾಸ ಮಾಸ್ತರ್ ಕಮಾರ್ತೆ, ಕುಲಾಲ ಸಂಘ ಕುಂಬಳೆ ಶಾಖೆಯ ಅಧ್ಯಕ್ಷ ಗಂಗಾಧರ ಕೆ. ಟಿ. ಕಿದೂರು, ಕಾರ್ಯದರ್ಶಿ ಅಶೋಕ್ ಪುಣಿಯೂರು, ಕೋಶಾಧಿಕಾರಿ ಕೃಷ್ಣ ಕಳತ್ತೂರು, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧೀರ್ ರಂಜನ್ ಕೆ. ದೈಗೋಳಿ, ಸುಧೀರ್ ಕೊಡಂಗೆ ಮೊದಲಾದವರು ಉಪಸ್ಥಿತರಿದ್ದರು.