ಚೆನ್ನೈ: ತಮಿಳುನಾಡಿನ ರಾಮೇಶ್ವರಂ ಬಳಿ ₹80 ಲಕ್ಷ ಮೌಲ್ಯದ 200 ಕೆ.ಜಿ 'ಸಮುದ್ರ ಸೌತೆ'ಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.
ರಾಮೇಶ್ವರಂ ಬಳಿಯ ದಕ್ಷಿಣ ಉಚಿಪುಲಿ ಸಮುದ್ರ ತೀರದಲ್ಲಿ ನಿಷಿದ್ಧ ವಸ್ತುಗಳ ಸಾಗಣೆ ಮಾಡುತ್ತಿರುವ ಬಗ್ಗೆ ದೊರಕಿದ ಖಚಿತ ಮಾಹಿತಿ ಮೇರೆಗೆ ಮಂಡಪಂನಲ್ಲಿ ರಕ್ಷಣಾ ಪಡೆಯು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಕಾರ್ಯಾಚರಣೆ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 200 ಕೆ.ಜಿ ತೂಕದ ಸಮುದ್ರ ಸೌತೆಯನ್ನು ಹೊಂದಿರುವ ಐದು ಡ್ರಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ₹80 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮುದ್ರ ಸೌತೆಯ ಮಾರಾಟಕ್ಕೆ ಸರ್ಕಾರವು ನಿಷೇಧ ಹೇರಿದೆ.