ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕೋಮು ಸೂಕ್ಷ್ಮ ಪಟ್ಟಣವನ್ನು ಬೆಚ್ಚಿಬೀಳಿಸಿದ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯನ್ನು 17 ವರ್ಷಗಳ ನಂತರ ಪೂರ್ಣಗೊಳಿಸಿರುವ ವಿಶೇಷ ಎನ್‌ಐಎ ನ್ಯಾಯಾಲಯ ತನ್ನ ತೀರ್ಪನ್ನು ಶನಿವಾರ ಮೇ 8ಕ್ಕೆ ಕಾಯ್ದಿರಿಸಿತು.
ಮುಂಬೈನಿಂದ ಸುಮಾರು 200 ಕಿ.ಮೀ.ದೂರದಲ್ಲಿರುವ ಮಾಲೆಗಾಂವ್ ಪಟ್ಟಣದ ಮಸೀದಿಯೊಂದರ ಬಳಿ 2008ರ ಸೆಪ್ಟೆಂಬರ್ 29ರಂದು ಬೈಕ್‌ನಲ್ಲಿ ಇಟ್ಟಿದ್ದ ಸಾಧನವೊಂದು ಸ್ಫೋಟಗೊಂಡು ಆರು ಜನರು ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಶನಿವಾರ ಪ್ರಾಸಿಕ್ಯೂಷನ್ ತನ್ನ ಅಂತಿಮ ವಾದಗಳನ್ನು ಲಿಖಿತವಾಗಿ ಸಲ್ಲಿಸಿತು. ನಂತರ ವಿಶೇಷ ನ್ಯಾಯಾಧೀಶ ಎ.ಕೆ. ಲಾಹೋಟಿ ತೀರ್ಪು ಕಾಯ್ದಿರಿಸಿ ಪ್ರಕರಣವನ್ನು ಮೇ 8ಕ್ಕೆ ಮುಂದೂಡಿದರು.