ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಮಕ್ಕಳಿಗಾಗಿ 9 ದಿನಗಳ ಬಾಲ ಪ್ರಬೋಧಿನಿ ಕಾರ್ಯಾಗಾರವನ್ನು ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ದೀಪಬೆಳಗಿಸಿ ಉದ್ಘಾಟಿಸಿದರು. ಗೋಶಾಲೆಯ ಆಡಳಿತ ಟ್ರಸ್ಟಿ ವಿಷ್ಣುಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ನಾಗರತ್ನ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರಿನ ವಿಶ್ವನಾಥನ್ ಎಂಬವರ ಬಳಿಯಿರುವ ಸಾವಿರಕ್ಕೂ ಹೆಚ್ಚು ನಾಣ್ಯಗಳು, ಸಾವಿರಕ್ಕೂ ಹೆಚ್ಚು ಕರೆನ್ಸಿ ನೋಟುಗಳು, ಸಾವಿರಕ್ಕೂ ಹೆಚ್ಚು ಅಂಚೆ ಚೀಟಿಗಳು ಮತ್ತು 197 ದೇಶಗಳ ಪ್ರಸಿದ್ಧ ವ್ಯಕ್ತಿಗಳ ಆರುನೂರಕ್ಕೂ ಹೆಚ್ಚು ಹಸ್ತಾಕ್ಷರಗಳ ಪ್ರದರ್ಶನ ನಡೆಯಿತು. ಏಪ್ರಿಲ್ 24ರ ತನಕ ಶಿಬಿರ ನಡೆಯಲಿದೆ. ಅಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಹಾಮಂಡಲೇಶ್ವರ ಸಾಧು ಆನಂದವನಂ ಭಾರತಿ ಸ್ವಾಮೀಜಿಯವರು ಮುಖ್ಯ ಅತಿಥಿಗಳಾಗಿ ಆಶೀರ್ವಚನ ನೀಡಲಿದ್ದಾರೆ. ವಯಲಿನ್ ವಿಸ್ಮಯ ಕುಮಾರಿ ಗಂಗಾ ಶಶಿಧರನ್ ವಯಲಿನ್ ಕಛೇರಿಯೂ ಜರಗಲಿದೆ.