ಮಂಜೇಶ್ವರ: ವರ್ಕಾಡಿ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ಕೂಟತ್ತಜೆಯಲ್ಲಿ ಶ್ರೀ ಉಳ್ಳಾಲ್ತಿ ಅಮ್ಮ, ಬಂಟ ಜಾವದೆ, ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಭಾನುವಾರ ಆರಂಭಗೊಂಡಿದ್ದು, ಏ.6 ರವರೆಗೆ ಜರಗಲಿದೆ. ಇದರ ಹೊರೆಕಾಣಿಕೆ ಮೆರವಣಿಗೆಯು ಮಜೀರ್ಪಳ್ಳಜೆ ಜಂಕ್ಷನ್ ನಿಂದ ಹೊರಟು ಸುಂಕದಕಟ್ಟೆ, ಬೇಕರಿ ಜುಂಕ್ಷನ್ ಹಾದಿಯಾಗಿ ತೌಡುಗೋಳಿ, ಮೊಂಟೆಪದವು, ಕೈರಂಗಳ ಮಾರ್ಗವಾಗಿ ಮುಡಿಪಿನ್ನಾರ್ ದೈವಸ್ಥಾನದ ಬಳಿ ಒಟ್ಟು ಸೇರಿ ಹೂಹಾಕುವಕಲ್ಲು ನಂದರಪದವು ಮಾರ್ಗವಾಗಿ ಕ್ಷೇತ್ರಕ್ಕೆ ತಲುಪಿತು. ಮೆರವಣಿಗೆಯಲ್ಲಿ ನಾಸಿಕ್ ಬ್ಯಾಂಡ್, ಸಿಂಗಾರಿ ಮೇಳ, ಡೊಳ್ಳುಕುಣಿತ, ಕುಣಿತ ಭಜನೆ, ಕಲ್ಲಡ್ಕ ಬೊಂಬೆ ಗಮನ ಸೆಳೆದವು.