ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ವಾರ್ಷಿಕ ಜತ್ರಾ ಮಹೋತ್ಸವ ಶ್ರೀದೇವರ ಅವಭೃತ ಸ್ನಾನ, ಧ್ವಜಾವರೋಹಣದೊಂದಿಗೆ ಗುರುವಾರ ಸಂಪನ್ನಗೊಂಡಿತು. ಕಳೆದ ಭಾನುವಾರ ದ್ವಜಾರೋಹಣದೊಂದಿಗೆ ಐದು ದಿವಸಗಳ ಕಾಲ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು.
ಗುರುವಾರ ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಸಂಜೆ ತಾಯಂಬಕ, ದೀಪಾರಾಧನೆ, ರಾತ್ರಿ ಶ್ರೀದೇವರ ಉತ್ಸವಬಲಿ, ವಿಶೇಷ ವಿದ್ಯುದ್ದೀಪಾಲಂಕಾರಗೊಂಡ ಶ್ರೀಕ್ಷೇತ್ರದ ಕೆರೆಯಲ್ಲಿ ಶ್ರೀದೇವರ ಅವಭೃತ ಸ್ನಾನ ನೆರವೇರಿತು. ನಂತರ ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು.