ಕಾಸರಗೋಡು: ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶನದನ್ವಯ ಕಸಮುಕ್ತ ನವಕೇರಳ ಅಭಿಯಾನದ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಿಲ್ಲೆಯ ವಿವಿಧ ಕರಾವಳಿ ಪ್ರವಾಸಿ ಕೇಂದ್ರಗಳಲ್ಲಿ ಮೂರು ದಿನಗಳ ಕಾಲ ಎಂಟು ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್(ಡಿಟಪಿಸಿ)ಕಾಸರಗೋಡು, ಪ್ರವಾಸೋದ್ಯಮ ಕ್ಲಬ್, ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾರ್ಚ್ 25 ರಿಂದ 27 ರವರೆಗೆ ನಡೆದ ಸ್ವಚ್ಛತಾ ಕಾರ್ಯವು ಕಾಸರಗೋಡು ಜಿಲ್ಲೆಯ ಪ್ರವಾಸಿ ತಾಣಗಳನ್ನು ಸ್ವಚ್ಛಗೊಳಿಸಲು ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು 'ಸ್ವಚ್ಛ ತಾಣ' ಅಭಿಯಾನದ ಅಂಗವಾಗಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ.
ಅಯಿತ್ತಲ ಬೀಚ್‍ನಲ್ಲಿ ಕುಟುಂಬಶ್ರೀಯ ಸಿಡಿಸಿ ಸ್ವಯಂಸೇವಕರಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕರಾವಳಿಯಿಂದ ಹತ್ತು ಚೀಲದಷ್ಟು ಕಸ ಸಂಗ್ರಹಿಸಲಾಯಿತು. ಜತೆಗೆ ಕೈಟ್ ಬೀಚ್ ನಿರ್ವಹಣಾ ತಂಡದಿಂದ ಬೀಚ್ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕಣ್ವತೀರ್ಥ ಬೀಚ್‍ನಲ್ಲಿ ಕುಟುಂಬಶ್ರೀಯ ಸಿಡಿಸಿ ಸ್ವಯಂ ಸೇವಕರು ಸ್ವಚ್ಛತಾಕಾರ್ಯದಲ್ಲಿ ತೊಡಗಿಸಿಕೊಂಡರು. .
ಚೆಂಬರಿಕಾ ಬೀಚ್‍ನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಟೂರಿಸಂ ಕ್ಲಬ್ ಸ್ವಯಂಸೇವಕರು ಮತ್ತು ಕುಟುಂಬಶ್ರೀ ಸದಸ್ಯರು ತ್ಯಜ್ಯ ಸಂಗ್ರಹಿಸಿದರು. ಜಿಲ್ಲಾ ಪಂಚಾಯಿತಿ, ಸರ್ಕಾರಿ ಕಾಲೇಜು, ಮಂಜೇಶ್ವರ ಸರ್ಕಾರಿ ಕಾಲೇಜು ಟೂರಿಸಂ ಕ್ಲಬ್ ಸೇರಿದಂತೆ ವಿದ್ಯಾರ್ಥಿಗಳ ಭಾಗವಹಿಸುವಿಕೆ ಪರಿಸರ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಉತ್ತಮ ಪೆÇ್ರೀತ್ಸಾಹ ಲಭಿಸರುವುದಲ್ಲದೆ, ಸ್ವಚ್ಛತಾ ಚಟುವಟಿಕೆ ಬೀಚ್‍ಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡಿತು,