ಪೆರ್ಲ: ಸ್ಥಳೀಯ ಸುತ್ತುಮುತ್ತಲಿನ ಪ್ರದೇಶದ ಜನರ ಆಶಯವಾದ ಮೌಲ್ಯಯುತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಾಧಾರಿತ ಪಠ್ಯಕ್ರಮದ ಶ್ರೀ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಆಡಳಿತ ಕಚೇರಿಯ ಉದ್ಘಾಟನೆ ಪೆರ್ಲದಲ್ಲಿ ಗುರುವಾರ ನಡೆಯಿತು. ಊರಿನ ಗಣ್ಯರೂ,ಹಿರಿಯರಾದ .ಕಜಂಪಾಡಿ ಸುಬ್ರಮಣ್ಯ ಭಟ್ ದೀಪ ಪ್ರಜ್ವಲನೆಯಗೈದು ಉದ್ಘಾಟಿಸಿ,ಆಂಗ್ಲಮಾಧ್ಯಮ ಶಿಕ್ಷಣದ ಆವಶ್ಯಕತೆಯನ್ನು ಸ್ವಾಮಿ ವಿವೇಕಾನಂದರ ಚಿಕಾಗೊ ನಗರದ ವಿಶ್ವ ಧರ್ಮ ಸಮ್ಮೇಳನದ ಉದಾಹರಣೆಯೊಂದಿಗೆ ತಿಳಿಯಪಡಿಸಿದರು.ನಮ್ಮ ದೇಶದ ಸಂಸ್ಕøತಿಯನ್ನು ಜಗತ್ತಿಗೆ ತಿಳಿಸಬೇಕಾದರೆ ಜಾಗತಿಕ ಸಂವಹನ ಭಾಷೆಯಾದ ಆಂಗ್ಲಮಾಧ್ಯಮದ ಅಧ್ಯಯನ ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರುಕುಲ ಮುದ್ರಣಾಲಯದ ರಾಜಾರಾಂ ಪೆರ್ಲ ಅವರು ಸ್ವಾಮಿ ವಿವೇಕಾನಂದರ ನುಡಿಗಳನ್ನು ಉದ್ದರಿಸುತ್ತ ವ್ಯಕ್ತಿಯ ವ್ಯಕ್ತಿತ್ವವು ಆತನು ಧರಿಸುವ ಪೋಷಾಕುಗಳಲ್ಲಿ ಇರುವುದಲ್ಲ. ಆದರೆ ಅತನ ಸಚ್ಚಾರಿತ್ರ್ಯದಲ್ಲಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಡಾ. ಶ್ರಿಪತಿ ಕಜಂಪಾಡಿ, ನಾಲಂದ ಕಾಲೇಜಿನ ಆಡಳಿತ ಮಂಡಳಿ, ನೂತನ ಶ್ರೀ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಆಡಳಿತ ಮಂಡಳಿ, ಊರಿನ ಹಿರಿಯರು ಹಾಗೂ ಪೋಷÀಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.