ಮಾಸ್ಕೊ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದ ಈಸ್ಟರ್ ಕದನ ವಿರಾಮವನ್ನು ಉಕ್ರೇನ್ ಸಾವಿರಕ್ಕೂ ಅಧಿಕ ಬಾರಿ ಉಲ್ಲಂಘಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.
ರಷ್ಯಾ ನೆಲೆಗಳ ಮೇಲೆ ಉಕ್ರೇನ್ 444 ಬಾರಿ ಗುಂಡಿನ ದಾಳಿ ನಡೆಸಿದೆ.
900ಕ್ಕೂ ಅಧಿಕ ಬಾರಿ ಡ್ರೋನ್ ದಾಳಿ ನಡೆಸಿದೆ ಎಂದು ಅದು ತಿಳಿಸಿದೆ.
ಆದರೆ ಯುದ್ಧ ಭೂಮಿಯ ವರದಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕದನ ವಿರಾಮ ಘೋಷಣೆಗೂ ಮುನ್ನ ರಷ್ಯಾದ ಸೇನಾ ಪಡೆಗಳು ಪೂರ್ವ ಉಕ್ರೇನ್‌ನ ನೊವೊಮಿಖೈಲಿವ್ಕಾ ನಗರದ ಮೇಲೆ ಆಧಿಪತ್ಯ ಸಾಧಿಸಿವೆ ಎಂದು ರಷ್ಯಾ ರಕ್ಷಣಾ ಇಲಾಖೆ ಹೇಳಿದ್ದಾಗಿ ಆರ್‌ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.