HEALTH TIPS

ಮಾತೃಪ್ರಧಾನವಾದ ನಮ್ಮ ಸಂಸ್ಕೃತಿ ಜಗತ್ತಿಗೆ ನೀಡಿರುವ ಸಂದೇಶವಾಹಕರು ನಾವಾಗಬೇಕು:ಕನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿ.

 ಮಧೂರು: ಸನ್ಮಂಗಳಕರವಾದ ನಿತ್ಯ ಪ್ರಾರ್ಥನೆಯಿಂದ ಒಳಿತು ಪ್ರಾಪ್ತಿಯಾಗುತ್ತದೆ. ಭಜಕರ ಬಹುವರ್ಷದ ಪ್ರಾರ್ಥನೆ ಫಲವಾಗಿ ಮಧೂರು ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಪರ್ವಕ್ಕೆ ಸಾಕ್ಷಿಯಾಗುವುದು ಪ್ರತಿಯೊಬ್ಬರ ಜೀವನದ ಪುಣ್ಯ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ತಿಳಿಸಿದರು..

ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ಸನ್ನಿಧಿಯಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆಯ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು/


ದೇವಾಲಯಗಳು ನಮ್ಮ ಸಂಸ್ಕೃತಿಯ ದಾರಿದೀಪಗಳು,ಅಲ್ಲಿಯ ಚ್ಯುತಿಗಳು ಸಮಾಜವನ್ನು ಬಾಧೀಸುತ್ತದೆ. ಜನರ ಸಂಕಟಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಆರಾಧನಾಲಯಗಳನ್ನು ಸುಸ್ಥಿತಿಯಲ್ಲಿರಿಸಿ ಹೋಮ-ಹವನ, ಆರಾಧನೆ, ಭಜನೆಗಳು ನಿತ್ಯ ನಡೆಯುತ್ತಿರಬೇಕು. ಸುರಕ್ಷಿತ ಮಂದಿರ, ಸುಭದ್ರ ಸಮಾಜ ಕಟ್ಟುವ ಕೆಲಸ ಆಗಬೇಕು ಎಂದವರು ಆಶೀರ್ವಚನದಲ್ಲಿ ತಿಳಿಸಿದರು.

ಕೊಲ್ಯ ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಧುಸೂದನ ಆಯರ್  ಅಧ್ಯಕ್ಷತೆ ವಹಿಸಿದ್ದರು.  

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೌರವ ಉಪಸ್ಥಿತರಿದ್ದು ಮಾತನಾಡಿ, ನಂಬಿಕೆ, ಆಚಾರ-ವಿಚಾರಗಳು ಪ್ರಾದೇಶಿಕ ವಿಭಿನ್ನತೆಯಿದ್ದರೂ ಭಾರತದಾದ್ಯಂತ ಸನಾತನ ಧರ್ಮ ಆರಾಧಿಸುವ ಆತ್ಯಂತಿಕ ಭಗವತ್‌ ಸ್ವರೂಪ ಒಂದೇ ಆಗಿದೆ. ಭಕ್ತ ಹಾಗೂ ಭಗವಂತನ ವ್ಯವಹಾರ ಕೇಂದ್ರಗಳು ದೇವಾಲಯಗಳು. ವಿಶಾಲ ಭರತ ಖಂಡದ ಶಕ್ತಿ ಇಲ್ಲಿಯ ಸನಾತನ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.  ಅಲೆಕ್ಸಾಂಡರ್‌ ನ ಗುರಿಉವಾದ ಅರಿಸ್ಟಾಟಲ್‌ ನ ಹೇಳಿಕೆ ಉಲ್ಲೇಖಿಸಿದ ಅವರು, ಮಹಾನ್‌ ಗ್ರಂಥಗಳಾದ ರಾಮಾಯಣ, ಭಗವದ್ಗೀತೆ, ಗಂಗಾಜಲ, ಕೃಷ್ಣನ ಕೊಳಲು ಹಾಗೂ ಋಷಿ ಪರಂಪರೆಯ  ತತ್ವಶಾಸ್ತ್ರಗಳೆಂಬ ಐದು ಸುವಸ್ತುಗಳು ಭಾರತ ಜಗತ್ತಿಗೆ ನೀಡಿದ ಮಹಾನ್‌ ಕಾಣ್ಕೆಗಳಾಗಿದ್ದು, ಹೊಸ ತಲೆಮಾರಿಗೆ ಅದನ್ನು ದಾಟಿಸುವ ಪ್ರಯತ್ನಗಳಾಗಬೇಕೆಂದರು. ಮಾತೃಪ್ರಧಾನವಾದ ನಮ್ಮ ಸಂಸ್ಕೃತಿ ಜಗತ್ತಿಗೆ ನೀಡಿರುವ ಸಂದೇಶವಾಹಕರು ನಾವಾಗಬೇಕು. ಸಾಮಾನ್ಯ ವಸ್ತುವೊಂದಕ್ಕೆ ಬೆಲೆ ಬರುವುದು ಅದರ ಆ ಬಳಿಕದ ಸ್ವರೂಪದಿಂದ. ಸಮೃದ್ಧ ವ್ಯಕ್ತಿತ್ವದ ಮೂಲಕ ನಾವು ಜನಪ್ರಿಯರಾಗುವುದರೊಂದಿಗೆ ದೇವರ ಪ್ರೀತಿ, ಅನುಗ್ರಹಕ್ಕೂ ಪಾತ್ರರಾಗುತ್ತೇವೆ. ಸನ್ಮನಸ್ಸಿನ ಪ್ರಾರ್ಥನೆಗೆ ಭಗವಂತ ಒಲಿದೇ ಒಲಿಯುತ್ತಾನೆ ಎಂದವರು ತಿಳಿಸಿದರು.


ಬಿಜೆಪಿ ಕರ್ನಾಟಕ ರಾಜ್ಯ ಮಾಜಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮುಖ್ಯ ಅತಿಥಿಗಳಾಗಿ ಉಪಸ್ತಿತರಿದ್ದು ಮಾತನಾಡಿ, ಭಗವಂತನಿಗೆ ಸಂಪೂರ್ಣ ಅರ್ಪಣೆ   ತ್ಯಾಗಗಳ ಮೂಲಕ ಸಲ್ಲಿಸುವ ಸೇವೆ ಕೃಪೆಗೆ ಕಾರಣವಾಗುತ್ತದೆ. ಶಿವನೊಂದಿಗೆ ವಿಲೀನಗೊಂಡಾಗ ಶಿವತ್ವ ಸಿದ್ದಿಸುತ್ತದೆ. ಇಲ್ಲಿ ನಡೆದಿರುವುದು ದಕ್ಷಿಣ ಭಾರತದ ಕುಂಭಮೇಳ ಎಂದರು. 

ಕರ್ನಾಟಕ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಸುಳ್ಯ ಎ.ಒ.ಎಲ್ ಅಧ್ಯಕ್ಷ ಕೆ.ವಿ.ಚಿದಾನಂದ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.    ಉದ್ಯಮಿ ಸತೀಶ್‌ರೈ ಕಲಂಗಾಳ, ಉದಯಕುಮಾರ್‌ ಕಲ್ಲೂರಾಯ ಮೇಗಿನಮನೆ,ಖ್ಯಾತ ವೈದ್ಯ ಜಯದೇವ ಕಂಗಿಲ,  ಗೋಪಾಲಕೃಷ್ಣ ಅಡಿಗ ಮುಟ್ಟತ್ತೋಡಿ, ಗೋಪಾಲಕೃಷ್ಣ ಕುಲಾಲ್‌ ವಾಂತಿಚ್ಚಾಲ್‌, ಉದ್ಯಮಿ ಸೌಂದರ್ಯ ಮಂಜಪ್ಪ, ಭಾರಿ ಭಂಡಾರಿ, ಸೂರ್ಯನಾರಾಯಣ ಮೊದಲಾದವರು ಉಪಸ್ಥಿತರಿದ್ದರು.


1962ರ ಬ್ರಹ್ಮಕಲಶದಲ್ಲಿ ಪ್ರಕಟಿಸಲಾಗಿದಗ್ದ ಮಧೂರು-ಪಾರ್ಥಿಸುಬ್ಬನ ವಿಚಾರಗಳನ್ನೊಳಗೊಂಡ ಕೃತಿಯ ಪರಿಷ್ಕೃತ ಪುಸ್ತಕ ಮಧುಪುರ ಕೃತಿಯನ್ನು ಈ ಸಂದೃಭ ಡಿ.ಕೆ.ಶಿವಕುಮಾರ್‌ ಬಿಡುಗಡೆಗೊಳಿಸಿದರು. ಅಂತರಾಷ್ಟ್ರೀಯ ಖ್ಯಾತಿಯ ಬೊಂಬೆಯಾಟ ನಿರ್ದೇಶಕ ಕೆ.ವಿ.ರಮೇಶ್‌ ಕಾಸರಗೋಡು ಸಂಪಾದಿಸಿರುವ ಈ ಕೃತಿ  ಗಮನಾರ್ಹ ವಿಷಯಗಳೊಂದಿಗೆ ಈದೀಗ ಮರು ಮುದ್ರಣಗೊಂಡಿದೆ. 

ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಗುರುಪ್ರಸಾದ್‌ಕೋಟೆಕಣಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಾಲಯ ಸಮಿತಿ ಸದಸ್ಯ ಜಗದೀಶ ಆಚಾರ್ಯ ಕಂಬಾರು ವಂದಿಸಿದರು. ಪತ್ರಕರ್ತ ಎಂ.ನಾ.ಚಂಬಲ್ತಿಮಾರ್‌ಕಾರ್ಯಕ್ರಮ ನಿರೂಪಿಸಿದರು.


 ಎಂದಿನ ನಗುಮೊಗದ ಶೈಲಿಯಲ್ಲಿ ಮಾತನಾಡಿದ ಡಿಕೆಶಿ ಅವರು, ವೇದಿಕೆಯಲ್ಲಿದ್ದ ನಳಿನ್‌ ಕುಮಾರ್‌ ಕಟೀಲು ಅವರನ್ನು ಉಲ್ಲೇಖಿಸಿ, ತಾನು ಕಾಂಗ್ರೆಸ್ಸ್‌ ಪಕ್ಷದ ಅಧ್ಯಕ್ಷನಾಗಿದ್ದಾಗ ಕಟೀಲ್‌ ಅವರುಉ ಬಿಜೆಪಿ ಅಧ್ಯಕ್ಷರಾಗಿದ್ದರು. ಇದೀಗ ನಾವು ಒಂದೇ ವೇದಿಕೆಯಲ್ಲಿ ಮಹಾಗಣೇಶನ ಪದತಲದಲ್ಲಿದ್ದೇವೆ. ಅಧಿಕಾರ ಶಾಶ್ವತವಲ್ಲ. ಕಟೀಲರ ದುಃಖ ದುಮ್ಮಾನ ಕಳೆದು ಭಗವದನುಗ್ರಹದಿಂದ ಮತ್ತೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷರಾಗಲೂ ಬಹುದೆಂದು ತಿಳಿಸಿದರು.

ಡಿಕೆಶಿ ಅವರು ಪತ್ನಿಯೊಂದಿಗೆ ಆಗಮಿಸಿದ್ದು, ಅತಿಥೇಯರು ಅವರ ಪತ್ನಿಯನ್ನು ವೇದಿಕೆಐೇರಲು ಒತ್ತಾಯಿಸಿದರೂ  ವರು ಸಮ್ಮತಿಸಲಿಲ್ಲ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries