ಮಂಜೇಶ್ವರ: ಭಾರತೀಯ ಸಂಸ್ಕೃತಿಗೆ ಕುಟುಂಬವೇ ತಾಯಿ ಬೇರು. ಎಲ್ಲಿ ಒಗ್ಗಟ್ಟು ಇರುತ್ತದೆಯೋ ಅಲ್ಲಿ ಸಹಕಾರ ಮನೋಭಾವನೆ ಬೆಳೆಯಲು ಸಾಧ್ಯ. ನಾಗಾರಾಧನೆಯಿಂದ ತುಳು ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪ.ಪೂ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನದಲ್ಲಿ ತಿಳಿಸಿದರು.
ದಡ್ಡಂಗಡಿ ತರವಾಡಿನ ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಬಡಾಜೆ ಗೋಪಾಲಕೃಷ್ಣ ಭಟ್, ವೇದಮೂರ್ತಿ ದಡ್ಡಂಗಡಿ ಬಾಲಕೃಷ್ಣ ಭಟ್, ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯ ದಾಮೋದರ ಶೆಟ್ಟಿ ಮಜಿಬೈಲು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಡ್ಡಂಗಡಿ ತರವಾಡು ಮನೆಯ ಎಲ್ಲಾ ಧಾರ್ಮಿಕ ವೈದಿಕ ಕಾರ್ಯಕ್ರಮವನ್ನು ನಡೆಸಿಕೊಡುವ ವೇದಮೂರ್ತಿ ಬಾಲಕೃಷ್ಣ ಭಟ್ ಇವರನ್ನು ಗೌರವಿಸಲಾಯಿತು. ದಡ್ಡಂಗಡಿ ತರವಾಡು ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ದಡ್ಡಂಗಡಿ ಚೆಲ್ಲಡ್ಕ ಸ್ವಾಗತಿಸಿ, ದಡ್ಡಂಗಡಿ ತರವಾಡು ಟ್ರಸ್ಟ್ ಕಾರ್ಯದರ್ಶಿ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ವಂದಿಸಿದರು. ಮಡಿಕೇರಿ ಪ್ರತಿಮಾ ಹರೀಶ್ ರೈ ದಡ್ಡಂಗಡಿ ಸನ್ಮಾನ ಪತ್ರ ವಾಚಿಸಿದರು. ಶರಣ್ಯ, ಜಿಶಾ, ವರ್ಷ ಪ್ರಾರ್ಥಿಸಿದರು. ಪ್ರಸಾದ್ ಭಂಡಾರಿ ದಡ್ಡಂಗಡಿ ಮತ್ತು ಜಯಪ್ರಕಾಶ ಶೆಟ್ಟಿ ಅಂಗಡಿದಾರು ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ನಾಗದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರಗಿತು. ಹಿಂದಿನ ದಿನ ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಮಕ್ಕಳಿಂದ ಕುಣಿತ ಭಜನೆ ನಡೆಯಿತು.