ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ಬೆಳಗ್ಗೆ 9.10ರಿಂದ 11 ಗಂಟೆ ಮಧ್ಯೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಧರ್ಮಶಾಸ್ತಾ, ದುರ್ಗಾ, ಸುಬ್ರಹ್ಮಣ್ಯ, ವೀರಭದ್ರ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಚೇಕ, ಹಂಸರೂಪೀ ಸದಾಶಿವ , ಕಾಶೀ ವಿಶ್ವನಾಥ ಸನ್ನಿಧಿಯಲ್ಲಿ ಕಲಶಾಭಿಷೇಕ, ಶ್ರೀ ರುದ್ರಯಾಗ ನೆರವೇರಿತು.
ಸಂಜೆ ಶ್ರೀ ಧರ್ಮಶಾಸ್ತಾ, ದುರ್ಗಾ, ಸಉಬ್ರಹ್ಮಣ್ಯ, ವೀರಭದ್ರ ಕಲಶಾಧಿವಾಸ, ಅಧಿವಾಸ, ವಿವಿಧ ಹೋಮಗಳು, ದಕ್ಪಾಲ ಹೋಮಗಳು, ಬಲಿ ಶಿಲಾ ಪ್ರತಿಷ್ಟೆ ನೆರವೇರಿತು. ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಸೀಮೆ ದೇಗುಲ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ಪುನ:ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸಾವಿರರು ಮಂದಿ ಭಕ್ತಾದಿಗಳು ಪಾಲ್ಗೊಮಡಿದ್ದರು.