ಮುಳ್ಳೇರಿಯ: ಮುಳಿಯಾರ್ ಪೇರಡ್ಕ ಮಹಾತ್ಮಜಿ ಗ್ರಂಥಾಲಯದ ಕಾರ್ಯಕಾರಿ ಸದಸ್ಯ ಸಾಜು ಅವರು ಕಾಲಗಳಿಂದ ರಕ್ಷಿಸಿ ಪೋಶಿಸುತ್ತಿದ್ದ ತಮ್ಮ 46 ಸೆಂಟಿಮೀಟರ್ ಉದ್ದದ ಕೂದಲನ್ನು ಕತ್ತರಿಸಿ, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರ ಸಮ್ಮುಖದಲ್ಲಿ ಆರ್‍ಸಿಸಿಗೆ ಹಸ್ತಾಂತರಿಸಲು ಮಹಾತ್ಮಜಿ ಗ್ರಂಥಾಲಯ ಸಮಿತಿಗೆ ಇತ್ತೀಚೆಗೆ ಹಸ್ತಾಂತರಿಸಿದರು. ಅವರ ಈ ಸೇವಾ ಕಾರ್ಯ ಸರ್ವತ್ರ ಶ್ಲಾಘನೆಗೊಳಗಾಗಬೇಕಾದ್ದು ಮತ್ತು ರೋಗಗಳಿಗೆ ತುತ್ತಾಗುವವರ ಬಗ್ಗೆ ಈ ರೀತಿಯ ಹೃದಯ ವಿಶಾಲತೆಯ ಕೆಲಸ ಸ್ತುತ್ಯರ್ಹವಾದುದು ಎಂದು ತಿಳಿಸಿದರು. ಗ್ರಂಥಾಲಯದ ಪದಾಧಿಕಾರಿಗಳು, ಆರ್.ಸಿ.ಸಿ. ಪ್ರತಿನಿಧಿಗಳು ಉಪಸ್ಥಿತರಿದ್ದರು.