ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ದೈವಸ್ಥಾನಗಳಲ್ಲೊಂದಾದ ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವರ್ಷಾವಧಿ ಜಾತ್ರೆ ಹಾಗೂ ಬಂಡಿ ಉತ್ಸವದ ಅಂಗವಾಗಿ ಶ್ರೀ ಕಿನ್ನಿಮಾಣಿ ದೈವದ ನೇಮೋತ್ಸವ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬಾಲಕೃಷ್ಣ ದೇವಾಡಿಗ ಬೆದ್ರಡ್ಕ ಮತ್ತು ಬಳಗದವರಿಂದ ಸ್ಯಾಕ್ಸೋ ಫೆÇೀನ್ ವಾದನ ಸೇವೆ ಹಾಗೂ ಶ್ರೀ ಚಾಮುಂಡೇಶ್ವರೀ ಕುಣಿತ ಭಜನಾಸಂಘ ದೊಡ್ಡ ಹಿತ್ಲು ಇವರಿಂದ ಕುಣಿತ ಭಜನೆ ಸೇವೆ ನಡೆಯಿತು.
ಏಪ್ರಿಲ್ 3ರಂದು ಮಧ್ಯಾಹ್ನ ಗಂಟೆ 1ಕ್ಕೆ ಶ್ರೀ ಬೀರ್ಣಾಳ್ವ ದೈವದ ನೇಮೋತ್ಸವ ನಂತರ ಗಂಟೆ 3.30ಕ್ಕೆ ಶ್ರೀ ಧೂಮಾವತೀ ದೈವದ ನೇಮೋತ್ಸವವೂ ನಡೆಯಲಿದೆ. ರಾತ್ರಿ 9ಗಂಟೆಗೆ ಮಂಗಳಸ್ನಾನ ಹಾಗೂ ತಂತ್ರಿವರ್ಯರಿಂದ ಧ್ವಜಾವರೋಹಣ ನಡೆಯಲಿದ್ದು ಬಳಿಕ ತಂಬಿಲ ಮಹಾ ಪೂಜೆ ಹಾಗೂ ಅಯ್ಯಂಗಾಯಿ ನಡೆಯಲಿದೆ.
ಏಪ್ರಿಲ್ 4ರಂದು ಬೆಳಿಗ್ಗೆ ಗಂಟೆ 9ಕ್ಕೆ ಕೋಟೆಕುಂಜ ಮಾಳ್ಯ ಮೂಲಸ್ಥಾನಕ್ಕೆ ಶ್ರೀಪೂಮಾಣಿ ಕಿನ್ನಿಮಾಣಿ ದೈವಗಳ ಕೀರ್ವಾಳುಗಳು, ಕಣ್ಣೂರು ಶ್ರೀ ಬೀರ್ಣಾಳ್ವ ದೈವದ ಮೂಲಸ್ಥಾನಕ್ಕೆ ಹಾಗೂ ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನಗಳಿಗೆ ಶ್ರೀ ಕ್ಷೇತ್ರದಿಂದ ದೈವಗಳ ಭಂಡಾರವು ತೆರಳಲಿದೆ.