ಲಿಸ್ಬನ್ (PTI): ಭಾರತೀಯರು ದೇಶಗಳನ್ನು ಗೆಲ್ಲಲು ಬಯಸುವುದಿಲ್ಲ, ಹೃದಯಗಳನ್ನು ಗೆಲ್ಲಲು ಇಷ್ಟಪಡುತ್ತಾರೆ ಎಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಲಿಸ್ಬನ್‌ನ 'ಚಂಪಾಲಿಮೌಡ್ ಸೆಂಟರ್ ಫಾರ್ ಅನ್‌ನೌನ್ಸ್'ನಲ್ಲಿ ಭಾರತ ಮೂಲದ ಸಂಶೋಧಕರ ಜತೆಗಿನ ಸಂವಾದದಲ್ಲಿ ಭಾಗವಹಿಸಿ, ಮಂಗಳವಾರ ಅವರು ಮಾತನಾಡಿದರು.
ಭಾರತದಲ್ಲಿ ಮಹಿಳೆಯರ ಪಾತ್ರ ಹೇಗಿದೆ ಎಂಬ ಪ್ರಶ್ನೆಗೆ, 'ಸೀತಾರಾಮ, ಲಕ್ಷ್ಮೀನಾರಾಯಣ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲೇ ಮಿಳಿತವಾಗಿದೆ' ಎಂದು ಉತ್ತರಿಸಿದರು.
ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಧ್ಯಯನ ನಡೆಸುತ್ತಿರುವ ಸಂಶೋಧಕರ ಪ್ರಶ್ನೆಗಳಿಗೆ ದ್ರೌಪದಿ ಮುರ್ಮು ಅವರು ಉತ್ತರಿಸಿದರು. ಭಾರತ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿ, ದೇಶಕ್ಕೆ ಕೀರ್ತಿ ತರಬೇಕೆಂದು ಕರೆನೀಡಿದರು.