ಮಧೂರು: ಭಾರತೀಯ ಕುಟುಂಬ ವ್ಯವಸ್ಥೆ ಮತ್ತು ಇಲ್ಲಿಯ ಆರಾಧನಾಲಯಗಳು ಜಗತ್ತಿನ ಇತರೆಡೆಗಳ ಮತ-ಪಂಥಗಳಿಗಿಂತ ಭಿನ್ನವಾಗಿಸುತ್ತದೆ. ಇಲ್ಲಿಯ ಸಂಸ್ಕøತಿಯಷ್ಠೇ ಹಳೆಯ ಇನ್ನಾವುದೂ ಇಂದು ನೆಲೆಗೊಳ್ಳದೆ ಸನಾತನ ಧರ್ಮವೊಂದೇ ಇಷ್ಟು ಸುಧೀರ್ಘವಾಗಿ ಮುಂದುವರಿದು ಬರಲು ಇದೇ ಕಾರಣ ಎಂದು ಕೊಳತ್ತೂರು ಅದ್ವೈತಾಶ್ರಮದ ಸಂಸ್ಥಾಪಕ, ಕೇರಳದ ಪ್ರಖ್ರ ಹಿಂದೂ ಸಂತ ಶ್ರೀಚಿದಾನಂದಪುರಿ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸನಾತನ ಧರ್ಮ ವನವಿದ್ದಂತೆ. ಇಲ್ಲಿ ಎಲ್ಲವೂ ಹುಲುಸಾಗಿ ಬೆಳೆಯಲು ಅವಕಾಶವಿದ್ದು, ಅದರಲ್ಲಿ ಕಳೆಗಳಿಲ್ಲ. ಎಲ್ಲವೂ ನಳನಳಿಸುವ ಹಸಿರು ಸಸ್ಯ ಶ್ಯಾಮಲಗಳು. ಆದರೆ ತೋಟದಂತಹ ಒಂದೇ ಬೆಳೆ ಮಿಕ್ಕಲ್ಲವೂ ಕಳೆ ಎಂಬುದರ ಪ್ರಭಾ ಇಂದು ಕಂಗೆಡಿಸುತ್ತಿರುವುದು ನಿಜ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಕøತಿ-ಜೀವನ ಧರ್ಮಗಳನ್ನು, ಯಜ್ಞ-ಯಾಗ, ಪೂಜೆ-ಭಜನೆಗಳನ್ನು ನವ ತರುಣ ಸಮಾಜಕ್ಕೆ ಕೈದಾಟಿಸುವ, ಸತ್ಪಥದ ಬೆಳಕು ನೀಡುವ ಕೆಲಸ ಸಜ್ಜನ ಸಮಾಜದಿಂದ ಆಗಬೇಕು ಎಂದರು. ಆದರ್ಶಗಳ ಸಂದೇಶಗಳನ್ನು ಹೊತ್ತುಬಂದ ಸಂಸ್ಕೃತಿ ನಮ್ಮದು. ಆ ಜೀ, ವನ-ಧರ್ಮಾದರ್ಶಗಳು ಪರಂಪರೆಯಿಂದ ಪರಂಪರೆಗೆ ವಿಶಾಲ ಕುಟುಂಬಗಳ ಮೂಲಕ ಸಾಗಿಬಂದಿದ್ದು ಆ ಕುಟುಂಬ ಇಂದು ವಿಘಟನೆಗೊಳ್ಳುತ್ತಿರುವುದು ಕಳವಳಕಾರಿ. ಭದ್ರ ಕುಟುಂಬ ವ್ಯವಸ್ಥೆಯನ್ನು ಪರಿಪೋಶಿಸಬೇಕು ಎಂದರು.
ಆರ್ಥಿಕ ಭದ್ರತೆ, ಪಂಚಮಹಾಯಜ್ಞಗಳ ಆಶೀರ್ವಾದ ನಮ್ಮನ್ನು ಇನ್ನಷ್ಟು ಸಮೃದ್ಧತೆಗೆ ಕೊಂಡೊಯ್ಯುತ್ತದೆ. ಕುಶಲ ಬುದ್ಧಿ, ಕೌಶಲ್ಯಾಧಾರಿತ ವೃತ್ತಿಪರತೆಯ ಮೂಲಕ ಸುದೃಢ ಸಮಾಜವನ್ನು ಕಟ್ಟುತ್ತಾ ಭಾರತೀಯ ಪರಂಪರೆಯ ಪೂರ್ವಸೂರಿಗಳು ಹಾಕಿಕೊಟ್ಟ, ಸತ್ಯಪರತೆಯ ಮಾದರಿಗಳೊಂದಿಗೆ ನೆಮ್ಮದಿಯ ಸಾಯುಜ್ಯ ಪ್ರಾಪ್ತಿಯ ಲಕ್ಷ್ಯ ನಮ್ಮಲ್ಲಿರಬೇಕು. ಸಕಲ ದೇವತೆಗಳ ಉಪಾಸನೆಯ ದೈವಯಜ್ಞದ ಬಲ ನಮ್ಮನ್ನು ಈ ನಿಟ್ಟಿನಲ್ಲಿ ಬಲ ನೀಡುತಯ್ತದೆ. ಬ್ರಹ್ಮಕಲಶಾಧಿ ಆರಾಧನೆಗಳು ನಮಗೆ ನಾವೇ ಮಾಡಿಕೊಳ್ಳುವ ಶಕ್ತಿ ಪ್ರವರ್ತನೆಯ ವಿಧಿಗಳಾಗಿವೆ. ನಮ್ಮೊಳಗೆ ಅವನ್ನು ಆವಾಹಿಸಿಕೊಳ್ಳಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಬಿ .ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಧಾರ್ಮಿಕ ಪರಿಷತ್ ಸ್ಥಾಯೀ ಸಮಿತಿ ಸದಸ್ಯ, ನಿವೃತ್ತ ನ್ಯಾಯಮೂರ್ತಿ ಶ್ರೀವತ್ಸ ಕೆದಿಲಾಯ ಮುಖ್ಯ ಅತಿಥಿಗಳಾಗಿ ಮಾತನಾಡಿ,ದೇವರ ಆರಾಧನೆಗಳನ್ನು ಎಷ್ಟು ಗೌಜುಗಳೊಂದಿಗೆ ಮಾಡಿದರೂ ಅದು ಆತ್ಯಂತಿಕವಾಗಿ ನಮ್ಮೊಳಗಿನ ಧೀಶಕ್ತಿ ಬೆಳಗುವಂತೆ ಇರಬೇಕು. ಡಾಂಭಿಕತೆಯನ್ನು ಮೆಟ್ಟಿನಿಂತ ಅಂತರಂಗದಲ್ಲಿ ಮಾನವೀಯ ಪ್ರೇಮ-ಸ್ನೇಹಗಳೊಂದಿಗೆ ಹೊರಹೊಮ್ಮಬೇಕು. ದ್ವೇಶ-ಅಸೂಯೆಗಳನ್ನು ಮರೆತು ಒಂದಾಗಿ ಬಾಳುವ, ;ಪರಸ್ಪರ ನೆರವಾಗುವ, ಹೃದಯ ಮಿಡಿಯುವ ಸ್ವಭಾವದವರಾದಾಗ ಭಗವಂತ ನಿಜಾರ್ಥದಲ್ಲಿ ಸಂಪ್ರೀತನಾಗುತ್ತಾನೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಿ.ರಾಮಯ್ಯ ಭಟ್ ಅರ್ಜುನಗುಳಿ, ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ.ನಾಗರಾಜ ಭಟ್ ಕಾಸರಗೋಡು, ನೇತ್ರತಜ್ಞ ಡಾ.ಸುರೇಶ್ ಬಾಬು, ಹಿರಿಯ ತಜ್ಞ ಡಾ. ಜನಾರ್ದನ ನಾಯ್ಕ್, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ಪವಿತ್ರಪಾಣಿ ರತನ್ ಕುಮಾರ್ ಕಾಮಡ ಉಪಸ್ಥಿತರಿದ್ದು ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು. ವಂದಿಸಿದರು. ಬ್ರಹ್ಮಕಲಶೋತ್ಸವ ಸಾಂಸ್ಕೃತಿಕ ಸಮಿತಿ ಸಂಚಾಲಕ ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.