ತಿರುವನಂತಪುರಂ: ರಾಜ್ಯದಲ್ಲಿ ಮಳೆ ಎಚ್ಚರಿಕೆಯಲ್ಲಿ ಬದಲಾವಣೆ ನೀಡಲಾಗಿದೆ. ಕೇಂದ್ರ ಹವಾಮಾನ ಇಲಾಖೆ ಶನಿವಾರ ಆರು ಜಿಲ್ಲೆಗಳಲ್ಲಿ ಯೆಲ್ಲೋ ಎಚ್ಚರಿಕೆ ನೀಡಿತ್ತು.
ಪತ್ತನಂತಿಟ್ಟ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳಿಗೆ ಯೆಲ್ಲೋ ಎಚ್ಚರಿಕೆಯನ್ನು ನೀಡಲಾಗಿತ್ತು. ಅಲ್ಲಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು.
24 ಗಂಟೆಗಳಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ ಮಳೆಯಾಗಿದ್ದರೆ ಅದನ್ನು ಭಾರೀ ಮಳೆ ಎಂದು ವ್ಯಾಖ್ಯಾನಿಸಲಾಗುತ್ತದೆ.
ಭಾನುವಾರ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಎಚ್ಚರಿಕೆ ನೀಡಲಾಗಿದೆ. ತಿರುವನಂತಪುರಂ, ಪತ್ತನಂತಿಟ್ಟ, ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳಿಗೆ ಈ ಎಚ್ಚರಿಕೆ ಜಾರಿಯಲ್ಲಿದೆ.
ಮುಂದಿನ ದಿನಗಳಲ್ಲಿ ಚಂಡಮಾರುತದ ಬಲ ಕಡಿಮೆಯಾಗುವ ಮುನ್ಸೂಚನೆ ಇದೆ. ಕೇಂದ್ರ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಮಳೆಯ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ.
ಕೊಲ್ಲಂ ಜಿಲ್ಲೆಯಲ್ಲಿ (ಆಲಪ್ಪಟ್ ನಿಂದ ಎಡವ ವರೆಗೆ) ಶನಿವಾರ (05/04/2025) ಮಧ್ಯಾಹ್ನ 02.30 ರಿಂದ ಭಾನುವಾರ (06/04/2025) ಬೆಳಿಗ್ಗೆ 11.30 ರವರೆಗೆ ವಿಕ್ಷಿಪ್ತ ಸಮುದ್ರ ವಿದ್ಯಮಾನದ ಭಾಗವಾಗಿ 0.9 ರಿಂದ 1.0 ಮೀಟರ್ ಎತ್ತರದ ಅಲೆಗಳಿಂದಾಗಿ ಸಮುದ್ರ ಕೊರೆತದ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಾಗರಶಾಸ್ತ್ರ ಸಂಶೋಧನಾ ಕೇಂದ್ರ ತಿಳಿಸಿದೆ.
ಪ್ರಕ್ಷುಬ್ದ ಸಮುದ್ರದ ವಿದ್ಯಮಾನದಿಂದಾಗಿ ತಿರುವನಂತಪುರಂ ಜಿಲ್ಲೆಯಲ್ಲಿ (ಕಾÀಪ್ಪಿಲ್‍ನಿಂದ ಪೂವಾರ್‍ವರೆಗೆ) ಭಾನುವಾರ (06/04/2025) ಬೆಳಿಗ್ಗೆ 11.30 ರವರೆಗೆ ಮತ್ತು ಕನ್ಯಾಕುಮಾರಿ ಕರಾವಳಿಯಲ್ಲಿ ಭಾನುವಾರ (06/04/2025) ಬೆಳಿಗ್ಗೆ 11.30 ರವರೆಗೆ 1.1 ರಿಂದ 1.2 ಮೀಟರ್‍ಗಳಷ್ಟು ಎತ್ತರದ ಅಲೆಗಳಿಂದಾಗಿ ಸಮುದ್ರ ಕೊರೆತ ಸಂಭವಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಾಗರಶಾಸ್ತ್ರ ಸಂಶೋಧನಾ ಕೇಂದ್ರವು ತಿಳಿಸಿದೆ.