HEALTH TIPS

ಪುರುಷಾರ್ಥ ಸಾಧನೆಯಿಂದ ಯಶಸ್ಸು: ಕೃಷ್ಣಾಪುರ ಶ್ರೀಗಳು-ಭಕ್ತಿ ಮಾರ್ಗವೊಂದೇ ದೈವಾನುಗ್ರಹಕ್ಕೆ ಪ್ರೇರಕ-ಆನೆಗುಂದಿ ಶ್ರೀ-ಮಧೂರು ಧಾರ್ಮಿಕ ಸಭೆಯಲ್ಲಿ ಆಶೀರ್ವಚನ

ಮಧೂರು:ಭಗಯ ವಂತನ ಭಕ್ತರಲ್ಲಿ ಐಹಿಕ ಮತ್ತು ಪಾರಮಾರ್ಥಿಕ ಎಂಬೆರಡಕ್ಕೂ ಅನುಗ್ರಹ ಬೇಕು. ಸಂಪತ್ತಿನ ಅಧಿದೇವತೆಯಾದ ರುದ್ರನ ಆರಾಧನೆ ಸಮೃದ್ಧಿಗೆ ಕಾರಣವಾಗುತ್ತದೆ. ಜೊತೆಗೆ ಸಾರ್ಥಕ್ಯ ಸಾಯುಜ್ಯಕ್ಕೂ ಅವನ ಅನುಗ್ರಹ ಬೇಕು. ಸಂಸಾರ ಬಂಧನದಲ್ಲಿ ಸಿಲುಕಿಯೂ ಸಿಲುಕದಂತೆ ಮನಸ್ಸಿನ ಸಾಧನೆಯ ಮೂಲಕ ಜೀವನವನ್ನು ಪಾವನಗೊಳಿಸಿ ಪುರುμÁರ್ಥ ಸಾಧನೆಯಿಂದ ಯಶಸ್ಸು ಸಾಧ್ಯ ಎಂದು ಉಡುಪಿ ಕೃμÁ್ಣಪುರ ಮಠದ ವಿದ್ಯಾಸಾಗರ ತೀರ್ಥ  ಮಹಾಸ್ವಾಮಿಗಳು ಅನುಗ್ರಹ ಆಶೀರ್ವಚನದಲ್ಲಿ ತಿಳಿಸಿದರು.

ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. 


 ಜೀವನದ ಉನ್ನತಿಗೂ ಅವನತಿಗೂ ಕಾರಣ ಮನಸ್ಸು. ಈ ಹಿನ್ನೆಲೆಯಲ್ಲಿ ಮನೋಸ್ಥಿತಿಗಳ ಸಕಾರಾತ್ಮಕ ಕಾಪಿಡುವಿಕೆ ನಮ್ಮ ಕೃರ್ತವ್ಯದಲ್ಲಿ ಆದ್ಯತೆ ನೀಡಬೇಕು. ಇದಕ್ಕೆ ದೈವಾನುಗ್ರಹದ  ಅನುಭೂತಿಗೆ ಸದ್ವಿಶಯಗಳತ್ತ ನಮ್ಮ ಕ್ರಿಯೆಗಳಿರಬೇಕು. ಪೂಜೆ, ಆರಾಧನೆ, ದೇವಾಲಯಗಳ ದರ್ಶನ ಈ ಮಾರ್ಗಗಳನ್ನು ಸುಗಮ ಗೊಳಿಸುತ್ತ್ತದೆ ಎಂದು ಆಶೀರ್ವಚನದಲ್ಲಿ ಅವರು ತಿಳಿಸಿದರು.

ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದ  ಆನೆಗುಂದಿ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಯಾವ ಕುಲದಲ್ಲಿ ಜನಿಸದರೂ ಭಗವದನುಗ್ರಹಕ್ಕೆ ಭಕ್ತಿ ಮಾರ್ಗವೊಂದೇ ನಮಗಿರುವ ಸುಲಭ ವಿಧಾನ. ಸಮಾಜದಲ್ಲಿ ಯಾರೂ ಮೇಲೂ ಅಲ್ಲ ಕೀಳೂ ಅಲ್ಲ. ನೇರವಾಗಿರುವುದಕ್ಕೆ ಮುರಿಯುವ ಭೀತಿ ಸಹಜ. ಆದರೆ, ಬಾಗಿದವರಿಗೆ ಆ ಭೀತಿ ಇಲ್ಲ. ಮನುಷ್ಯರಲ್ಲಿ ಭಗವಂತನನ್ನು ಕಾಣಬೇಕೆಂಬ ನಮ್ಮ ಸಂಸ್ಕøತಿಯಲ್ಲಿ ಇತರರೊಂದಿಗೆ ಬಾಗಿ ಬದುಕುವ, ಸಾಧನಾ ಪಥದಲ್ಲಿ ಲಕ್ಷ್ಯ ಪ್ರಾಪ್ತಿಯನ್ನು ಗುರಿಯಾಗಿಸಿ ಸಾಗುವ  ಭಜಕರಿಗೆ ಸದಾ ಇರುತ್ತದೆ ಎಂದವರು ತಿಳಿಸಿದರು. ಶ್ರದ್ಧಾಕೇಂದ್ರಗಳು ನಮ್ಮನ್ನು ಒಗ್ಗೂಡಿಸುವ, ಒಮ್ಮತದಿಂದ ಸಾಗುವ ಪಾಠ ಕಲಿಸುವ, ಸತ್ಪಥದ ಹಾದಿ ತೋರಿಸುವ ಬೆಳಕಾಗಿದೆ ಎಂದವರು ನೆನಪಿಸಿದರು.


 ಮೈಸೂರಿನ ಶ್ರೀಅರ್ಜುನ ಅವಧೂತ ಮಹಾರಾಜರು ಉಪಸ್ಥಿತರಿದ್ದು ಮಾತನಾಡಿ, ದೇವರ ನೆಲವಾದ ಕೇರಳದ ಆಚಾರ-ವಿಚಾರ, ಆರಾಧನೆಗಳು ವಿಶೇಷ ಮಹತ್ವಿಕೆಯಿಂದ ಕೂಡಿದ್ದು, ಕರ್ಮಭೂಮಿಯೂ, ಧರ್ಮ ಭೂಮಿಯೂ ಆದ ಇಲ್ಲಿ ಭಗವಂತನ ಅನುಗ್ರಹ ಅತಿ ಸುಲಭ. ಹಿಂದೂ ಧರ್ಮದ ಮೇಲಾಗುವ ಎಲ್ಲಾ ಸವಾಲುಗಳನ್ನೂ ಮೆಟ್ಟಿನಿಂತು ಏಕತೆಯ ಮಂತ್ರದೊಂದಿಗೆ ಸಾಗುವ ಮನಸ್ಸು ನಮ್ಮದಾಗಲಿ ಎಂದವರು ತಿಳಿಸಿದರು.

ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿರು.

ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಧ್ಯಕ್ಷತೆ ವಹಿಸಿದ್ದರು.  ಪೆರಿಯ ಗೋಕುಲಂ ಗೋಶಾಲೆಯ ಸಂಸ್ಥಾಪಕ ವಿಷ್ಣುಪ್ರಸಾದ ಹೆಬ್ಬಾರ್, ಮಲ್ಲ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ದಿವ್ಯ ಉಪಸ್ಥಿತರಿದ್ದ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ.ಕೆ.ಎಸ್., ದೈವಜ್ಞ ನಾಗೇಂದ್ರ ಭಾರಧ್ವಾಜ್ ಸುರತ್ಕಲ್ ಮುಖ್ಯ ಅತಿಥಿಗಳಾಗಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಆನಂದ, ವಾಸುದೇವ ಹೊಳ್ಳ ಎಲ್ಲಂಗಳ, ಅಲಂಕಾರ ಸಮಿತಿ ಸಂಚಾಲಕ ಯೋಗೀಶ್ ಎಂ.ಆರ್., ಗಣೇಶ್ ನಾಯ್ಕ್ ದುಬೈ, ಮಧೂರು ಕಾಳಿಕಾಂಬ ಮಠದ ಅಧ್ಯಕ್ಷ ಕೋಟೆಕ್ಕಾರ್ ಪ್ರಭಾಕರ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಮುರಳೀಕುಮಾರ್, ಗಿರೀಶ್ ಉಪಸ್ಥಿತರಿದ್ದು ಮಾತನಾಡಿದರು.  

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ನಾರಾಯಣಯ್ಯ ಕೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಧನಂಜಯ ಮಧೂರು ವಂದಿಸಿದರು. ಲೋಕೇಶ್ ಎಂ.ಬಿ.ಆಚಾರ್ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries