ಬದಿಯಡ್ಕ: ಕಾರ್ಟೂನ್ ಕಲಾವಿದ, ಚುಟುಕು ಸಾಹಿತಿ ವೆಂಕಟ್ ಭಟ್ ಎಡನೀರು ಅವರು ಕಣ್ಣೂರಿನ ನವಪುರಂ ಮಾತಾತೀತ ದೇವಾಲಯದಿಂದ ನೀಡುವ ಪಂಚಭಾಷಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 27 ರಂದು ನವಪುರಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ವಿದ್ಯಾಧರ ಕನ್ನಡ ಪ್ರತಿಷ್ಠಾನ ದಾವಣಗೆರೆ ಮಾತೋಶ್ರೀ ಜಾನಕಿಬಾಯಿ ರಂಗರಾವ್ ಮುತಾಲಿಕ್ ದೇಸಾಯಿ ಸಂಸ್ಮರಣೆ ಅಂಗವಾಗಿ ನೀಡುವ ಕನ್ನಡ ನುಡಿ ತೇರು ಪ್ರಶಸ್ತಿಗೂ ಅವರು ಆಯ್ಕೆಯಾಗಿದ್ದಾರೆ. ಎ.20 ರಂದು ದಾವಣಗೆರೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.