HEALTH TIPS

ಅಣು ಯೋಜನೆ: ಇರಾನ್‌-ಅಮೆರಿಕ ಒಮಾನ್‌ನಲ್ಲಿ ಮಾತುಕತೆ

ಮಸ್ಕತ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲಾರಿಡಾದಿಂದ ಶ್ವೇತಭವನಕ್ಕೆ ಮರಳಿದ ನಂತರ ಪರಮಾಣು ಯೋಜನೆ ಬಗ್ಗೆ ಇರಾನ್ ಮತ್ತು ಅಮೆರಿಕದ ರಾಯಭಾರಿಗಳು ಶನಿವಾರ ಒಮಾನ್‌ನಲ್ಲಿ ಮಾತುಕತೆಗಳನ್ನು ಪ್ರಾರಂಭಿಸಿದ್ದಾರೆ. 

ಪಶ್ಚಿಮ ಏಷ್ಯಾದ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮೀರ್‌ ಪುಟಿನ್‌ ಅವರನ್ನು ಭೇಟಿಯಾದ ನಂತರ ಒಮಾನ್‌ಗೆ ಬಂದಿದ್ದು, ಈ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ.

ಪರಮಾಣು ಯೋಜನೆ ಬಗ್ಗೆ ಅಮೆರಿಕದ ರಾಯಭಾರಿ ಜತೆಗೆ 'ಪರೋಕ್ಷ ಮಾತುಕತೆ' ನಡೆಯುತ್ತಿದೆ ಎಂದು ಇರಾನ್‌ ಹೇಳಿಕೊಂಡಿದ್ದರೆ, ಟ್ರಂಪ್‌ ಮತ್ತು ವಿಟ್ಕಾಫ್‌ 'ಇದು ನೇರ ಮಾತುಕತೆ' ಎಂದು ಬಣ್ಣಿಸಿದ್ದಾರೆ.

'ಪರೋಕ್ಷ ಮಾತುಕತೆ ಪ್ರಾರಂಭವಾಗಿದೆ. ಈ ಮಾತುಕತೆಗಳು ಒಮಾನಿ ಆತಿಥೇಯರು ನಿಗದಿಪಡಿಸಿದ ಸ್ಥಳದಲ್ಲಿ ನಡೆಯುತ್ತಿದೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ಅಮೆರಿಕದ ಪ್ರತಿನಿಧಿಗಳು ಒಮಾನಿ ವಿದೇಶಾಂಗ ಸಚಿವರ ಮೂಲಕ ತಮ್ಮ ದೃಷ್ಟಿಕೋನಗಳು ಮತ್ತು ನಿಲುವುಗಳನ್ನು ಪರಸ್ಪರ ತಿಳಿಸಲಿದ್ದಾರೆ' ಎಂದು ಇರಾನಿನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಾಘೈ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಕ್ಷಣಕ್ಕೆ ಯಾವುದೇ ಒಪ್ಪಂದ ಏರ್ಪಡುವ ನಿರೀಕ್ಷೆ ಇಲ್ಲ. ಈ ಎರಡು ರಾಷ್ಟ್ರಗಳು ಅರ್ಧ ಶತಮಾನದ ವೈರತ್ವವನ್ನು ಕೊನೆಗೊಳಿಸಲು ನಡೆಸುತ್ತಿರುವ ಈ ಮಾತುಕತೆಯಲ್ಲಿ ಉಭಯತ್ರರು ಹೆಚ್ಚಿನ ನಿರೀಕ್ಷೆಯನ್ನೂ ಮಾಡುವಂತಿಲ್ಲ. ಏಕೆಂದರೆ, ಟ್ರಂ‍ಪ್‌ ಅವರು ಒಪ್ಪಂದಕ್ಕೆ ಬರದಿದ್ದರೆ ಇರಾನ್‌ನ ಪರಮಾಣು ಯೋಜನೆಯನ್ನು ಗುರಿಯಾಗಿಸಿಕೊಂಡು ಬಾಂಬ್‌ ದಾಳಿ ನಡೆಸುವುದಾಗಿ ಪದೇ ಪದೇ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಗೆ ಜಗ್ಗದೆ ಇರಾನ್‌ ಅಧಿಕಾರಿಗಳು ಕೂಡ ಅಣ್ವಸ್ತ್ರ ತಯಾರಿಕೆಯನ್ನು ಮುಂದುವರಿಯಲಿದೆ ಎಂದು ಸಡ್ಡುಹೊಡೆದಿದ್ದಾರೆ.

'ನಿಮ್ಮ ಕಾರ್ಯಕ್ರಮ (ಇರಾನ್‌ ಅಣು ಯೋಜನೆ) ಹೊಸಕಿಹಾಕುವುದರೊಂದಿಗೆ ನಮ್ಮ ನಿಲುವು ಶುರುವಾಗಲಿದೆ ಎನ್ನುವುದು ನನ್ನ ಭಾವನೆ. ಅದು ಈ ದಿನದ ನಮ್ಮ ನಿಲುವು ಕೂಡ ಹೌದು' ಎಂದು ವಿಟ್ಕಾಫ್ ತಮ್ಮ ಪ್ರವಾಸದ ಮೊದಲು 'ದಿ ವಾಲ್ ಸ್ಟ್ರೀಟ್ ಜರ್ನಲ್‌'ಗೆ ತಿಳಿಸಿದ್ದಾರೆ.

'ಇದರರ್ಥ, ಎರಡೂ ದೇಶಗಳ ನಡುವೆ ರಾಜಿ ಮಾಡಿಕೊಳ್ಳಲು ನಾವು ಬೇರೆ ಮಾರ್ಗಗಳನ್ನು ಕಂಡುಕೊಳ್ಳುವುದಿಲ್ಲ ಎಂದಲ್ಲ' ಎನ್ನುವ ಮಾತನ್ನೂ ಅವರು ಸೇರಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷ ( ಶುಕ್ರವಾರ ರಾತ್ರಿ ಫ್ಲಾರಿಡಾಕ್ಕೆ ಏರ್ ಫೋರ್ಸ್ ಒನ್‌ನಲ್ಲಿ ಪ್ರಯಾಣಿಸುವಾಗ ನೀಡಿರುವ ಹೇಳಿಕೆ) ಇರಾನ್ ಅದ್ಭುತ ಶ್ರೇಷ್ಠ ಮತ್ತು ಸಂತೋಷಭರಿತವಾದ ದೇಶವಾಗಬೇಕೆಂದು ನಾನು ಬಯಸುತ್ತೇನೆ. ಆದರೆ ಅವರು ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ ಮೈಕ್ ವಾಲ್‌ಟ್ಜ್‌ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಇರಾನ್‌ ಪರಮಾಣು ಯೋಜನೆಯು ಅದರ ತುಷ್ಠೀಕರಣ ಶಸಸ್ತ್ರೀಕರಣ ಮತ್ತು ಅದರ ಕಾರ್ಯತಂತ್ರದ ಕ್ಷಿಪಣಿ ಕಾರ್ಯಕ್ರಮವಾಗಿದೆ. ಹಾಗಾಗಿ ಅದನ್ನು ಸಂಪೂರ್ಣ ತೊಡೆದುಹಾಕಲು ಟ್ರಂಪ್ ಬಯಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries