ಬ್ರಸೆಲ್ಸ್ (AP): ಅಮೆರಿಕದಿಂದ ಆಮದಾಗುವ ಒಟ್ಟು 23 ಬಿಲಿಯನ್ ಡಾಲರ್ (ಅಂದಾಜು ₹1.99 ಲಕ್ಷ ಕೋಟಿ) ಮೌಲ್ಯದ ಉತ್ಪನ್ನಗಳಿಗೆ ಪ್ರತಿಸುಂಕ ವಿಧಿಸಲು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಶೇಕಡ 25ರಷ್ಟು ತೆರಿಗೆ ವಿಧಿಸಿರುವುದಕ್ಕೆ ಪ್ರತಿಯಾಗಿ ಒಕ್ಕೂಟದ ದೇಶಗಳು ಸುಂಕ ವಿಧಿಸಲು ತೀರ್ಮಾನಿಸಿವೆ.
ಆದರೆ, ಯಾವ ಉತ್ಪನ್ನಕ್ಕೆ ಎಷ್ಟು ಸುಂಕ ಎಂಬುದರ ನಿರ್ದಿಷ್ಟ ವಿವರವನ್ನು ಒಕ್ಕೂಟವು ಹಂಚಿಕೊಂಡಿಲ್ಲ. ಐರೋಪ್ಯ ಒಕ್ಕೂಟವು 27 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಸುಂಕ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ತನ್ನ ಆದ್ಯತೆ ಎಂಬುದನ್ನು ಒಕ್ಕೂಟವು ಪುನರುಚ್ಚರಿಸಿದೆ.