ಮಧುರೈ: ಮುಸ್ಲಿಂ ತುಷ್ಟೀಕರಣವೇ ಸಿಪಿಎಂಗೆ ಇರುವ ಏಕೈಕ ಮಾರ್ಗ ಎಂಬ ತೀರ್ಮಾನಕ್ಕೆ sಸಿಪಿಎಂ ರಾಷ್ಟ್ರೀಯ ಕಾಂಗ್ರೆಸ್ ತೀರ್ಮಾನಿಸಿದೆ.
ಪ್ರತಿಯೊಂದು ರಾಜ್ಯದ ಮುಸ್ಲಿಂ ಜನಸಂಖ್ಯೆಯನ್ನು ನೋಡಿದಾಗ, ಆ ಭಾಗದಲ್ಲಿ ಪಕ್ಷದ ಸದಸ್ಯತ್ವವು ತುಂಬಾ ಕಡಿಮೆಯಾಗಿದೆ ಎಂದು ಕಂಡುಬರುತ್ತದೆ. ಇದನ್ನು ನಿವಾರಿಸಲು ಕಾರ್ಯತಂತ್ರ ರೂಪಿಸಬೇಕೆಂದು ಪಕ್ಷದ ಕಾಂಗ್ರೆಸ್(ರಾಷ್ಟ್ರ ಸಮಾವೇಶ) ಸೂಚಿಸುತ್ತದೆ. ಅಲ್ಪಸಂಖ್ಯಾತರ ಬೆಂಬಲದಿಂದ ಮಾತ್ರ ಬಿಜೆಪಿಯನ್ನು ಎದುರಿಸಲು ಸಾಧ್ಯ. ಹಿಂದೂ ಶಕ್ತಿಗಳನ್ನು ಎದುರಿಸಲು ಸಿಪಿಎಂ ಜೊತೆ ನಿಲ್ಲಬೇಕೆಂಬ ಸಂದೇಶವನ್ನು ಮುಸ್ಲಿಮರಲ್ಲಿ ಬಲಪಡಿಸುವ ಪ್ರಯತ್ನಗಳನ್ನು ಹೆಚ್ಚಿಸಬೇಕು. ಕೇರಳದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಅಲ್ಪಸಂಖ್ಯಾತ ಸಮುದಾಯಗಳು ಪಕ್ಷದ ಮೇಲೆ ನಂಬಿಕೆ ಇಡದಿರುವುದೇ ಕಾರಣ. ಕೇರಳದಲ್ಲಿ ಕ್ರಿಶ್ಚಿಯನ್ ಗುಂಪುಗಳನ್ನು ಇನ್ನು ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಲಾಗದೆಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಪಕ್ಷವು ಮುಸ್ಲಿಮರಲ್ಲಿ ಮಾತ್ರ ಭರವಸೆ ಇಡಲು ಸಾಧ್ಯ ಎಂದು ಸಿಪಿಎಂ ನಂಬಿದೆ.