ಪಾಲಕ್ಕಾಡ್: ಮುಂಡೂರಿನಲ್ಲಿ ಕಾಡಾನೆಯ ದಾಳಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಕೈರಾಮ್‍ಕೋಡ್ ಮೂಲದ ಅಲನ್(28) ಎಂದು ಗುರುತಿಸಲಾಗಿದೆ.
ಘಟನೆಯ ಸಮಯದಲ್ಲಿ ಅಲನ್ ಜೊತೆಗಿದ್ದ ಅವರ ತಾಯಿ ವಿಜಿ ಗಾಯಗೊಂಡಿರುವರು. ನಿನ್ನೆ ರಾತ್ರಿ 7.45ರ ಸುಮಾರಿಗೆ ಈ ಘಟನೆ ನಡೆದಿದೆ.
ಕಾಡಾನೆ ಹಿಂದಿನಿಂದ ದಾಳಿ ಮಾಡಿರುವುದಾಗಿ ಹೇಳಲಾಗಿದೆ. ಅಲನ್‍ನ ಎದೆಗೆ ಆಳವಾದ ಇರಿತವಾಗಿದೆ. ಅಲನ್ ಸ್ಥಳದಲ್ಲೇ ಮೃತಪಟ್ಟರು.
ಈ ದಾಳಿ ಕನ್ನಡಂಚೋಲೆ ಬಳಿ ನಡೆದಿದೆ. ತಾಯಿ ಮತ್ತು ಪುತ್ರ ಪೇಟೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಕಾಡಾನೆ ದಾಳಿ ಮಾಡಿ ಈ ಅವಘಡ ಉಂಟಾಗಿದೆ. ಗಾಯಗೊಂಡ ಅಲನ್ ತಾಯಿ ವಿಜಿ ಅವರನ್ನು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅಲನ್ ಚರ್ಚ್ ಪಾದ್ರಿಯಾಗುವ ವ್ಯಾಸಂಗದಲ್ಲಿದ್ದರು ಎಂದು ತಿಳಿದುಬಂದಿದೆ.