ಕುಂಬಳೆ: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕೃತಿ ಉತ್ಸವ ಮೇ 3ರಂದು ಬೆಳಗ್ಗೆ 9ರಿಂದ ಕಾಸರಗೋಡು ಸೀತಾಂಗೊಳಿಯ ಅಲಯನ್ಸ್ ಸಭಾಭವನದಲ್ಲಿ ಜರಗಲಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಹಾಗೂ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ರಚಿಸಲಾದ ಸ್ವಾಗತ ಸಮಿತಿ ಸಹಿತ ವಿವಿಧ ಸಮಿತಿಗಳ ಸಭೆ ಸೀತಾಂಗೋಳಿಯ ಸಂತೋಷ್ ಕ್ಲಬ್ ಕಾರ್ಯಾಲಯದಲ್ಲಿ ಜರಗಿತು.
ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಧಾರ್ಮಿಕ ಮುಖಂಡ ರಾಮಪ್ಪ ಮಂಜೇಶ್ವರ, ಮಹಾಲಿಂಗ ಕೆ, ಅಪ್ಪಣ್ಣ ಸೀತಾಂಗೋಳಿ, ಮಾನ ಮಾಸ್ತರ್, ದೇವದಾಸ್ ಪಾರೆಕಟ್ಟೆ, ಅಜಿತ್ ಸ್ವರ್ಗ,ಜೋನ್ ಡಿ'ಸೋಜ ಮೊದಲಾದವರು ಉಪಸ್ಥಿತರಿದ್ದರು. ವಕೀಲ ಥಾಮಸ್ ಡಿ' ಸೋಜಾ ಸ್ವಾಗತಿಸಿ, ಶ್ರೀಕಾಂತ್ ನೆಟ್ಟಣಿಗೆ ವಂದಿಸಿದರು.
ಧರ್ಮಸ್ಥಳ ಸ್ವ ಸಹಾಯ ಸಂಘ, ಶೌರ್ಯ ಘಟಕ, ಸಂತೋಷ್ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್, ರಚನಾ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್, ವಿವಿಧ ಕುಟುಂಬಶ್ರೀ ಘಟಕಗಳು ಈ ಉತ್ಸವದಲ್ಲಿ ಜೊತೆಯಾಗಿದ್ದು, ಕರ್ನಾಟಕದ ವಿವಿದ ಸಚಿವರು ಭಾಗವಹಿಸುವರು.