ಕಾಸರಗೋಡು: ಹೊಸದುರ್ಗ ಉದಿನೂರ್ ನಿವಾಸಿ, ಎಂಬಿಬಿಎಸ್ ವಿದ್ಯಾರ್ಥಿನಿ ಮೃತದೇಹ ಆಕೆ ಕಲಿಯುತ್ತಿರುವ ಕೊಚ್ಚಿ ಕಳಮಶ್ಯೇರಿಯ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉದಿನೂರ್ ಅಡಿಯನ್ ಕೊವ್ವಲ್ ನಿವಾಸಿ ಹಾಗೂ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಪಿ.ಪಿ. ಅಂಬಿಳಿ(24)ಮೃತಪಟ್ಟ ವಿದ್ಯಾರ್ಥಿನಿ. ಶನಿವಾರ ರಾತ್ರಿ ಅಂಬಿಳಿ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಸಹಪಾಠಿಗಳು ಕಂಡು ಮಾಹಿತಿ ನೀಡಿದ್ದರು. ಕಳಮಶ್ಯೇರಿ ಠಾಣೆ ಪೊಲೀಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.