ಮಧೂರು : ಏಕಾಗ್ರತೆಯಿಂದ ಕೂಡಿದ ಮನಸ್ಸಿಗಷ್ಟೆ ಶಾಂತಿ ಸಮಾಧಾನ ಲಭ್ಯವಾಗಲು ಸಾಧ್ಯವಿದ್ದು, ಇದಕ್ಕಾಗಿ ದೇವಾಲಯಗಳ ಸಂದರ್ಶನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕಲ್ಪಿಸಲಾಗಿದೆ ಎಂದು ಚಿನ್ಮಯ ಮಿಷನ್ ಕೇರಳ ಪ್ರಾದೇಶಿಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ತಿಳಿಸಿದರು.
ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಬುಧವಾರ ಬೆಳಿಗ್ಗೆ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸರ್ವರಿಗೂ ಒಳಿತಾಗಲೆಂಬುದು ಸನಾತನ ಧರ್ಮದ ಮೂಲ ಸೂತ್ರವಾಗಿದೆ. ಎಲ್ಲಡೆಯೂ ವ್ಯಾಪಿಸಿರುವ ಭಗವಂತನ ಶಕ್ತಿ ದೇವಾಲಯಗಳಲ್ಲಿ ಒಂದೆಡೆ ಆ ಚೈತನ್ಯ ಕೇಂದ್ರೀಕೃತವಾಗಿ ಭಗವದನುಗ್ರಹದ ಸುಲಭ ಮಾರ್ಗವಾಗಿ ಭಜಕರಿಗೆ ಪ್ರಾಪ್ತವಾಗುತ್ತದೆ. ತಪಸ್ಸಿನಿಂದ ನಮಗೆ ಸಮಾಧಾನ ಲಭಿಸುವುದರ ಜತೆಗೆ ನೆಮ್ಮದಿ-ಸಂತೃಪ್ತಿ ನಮ್ಮದಾಗುತ್ತದೆ. ವಿಗ್ರಹದ ಆಕಾರ, ರೂಪವಿಶಿಷ್ಟವಾಗಿ, ಅದು ಆಧ್ಯಾತ್ಮಿಕ ಉನ್ನತಿಯ ತತ್ವವನ್ನು ಅಡಕವಾಗಿಸಿಕೊಂಡಿದೆ.
ವಕೀಲ ಸುಬ್ಬಯ್ಯ ರೈ ಇಚ್ಲಂಪಾಡಿ ಗುತ್ತು ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸವಯಂಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅವರು ಪ್ರಧಾನ ಉಪನ್ಯಾಸ ನೀಡಿ, ಸಾಮಾಜಿಕ ಒಗ್ಗಟ್ಟು ಬಲಗೊಳಿಸುವುದು ದೇವಸ್ಥಾನಗಳ ಒಟ್ಟು ಉದ್ದೇಶವಾಗಿದೆ. ಧರ್ಮ, ಸಂಸ್ಕøತಿ, ಸಮಾಜ, ರಾಷ್ಟ್ರ ಎಂಬ ಪರಿಕಲ್ಪನೆಗಳೇ ಭಾರತೀಯ ಮೇರು ತತ್ವಗಳಾಗಿವೆ. ಇಲ್ಲಿನ ಜನರ ಪ್ರಬಲ ಆಧ್ಯಾತ್ಮಿಕ ಶಕ್ತಿ, ಸಾಮೂಹಿಕ ಯತ್ನಗಳಿಂದಗಿ ಹಲವು ಆಕ್ರಮಣ, ದಂಗೆಗಳ ನಂತರವೂ ನಾತನ ಸಂಸ್ಕೃತಿ ಗಟ್ಟಿಯಾಗಿ ತಳವೂರಲು ಸಾಧ್ಯವಾಗಿದೆ.
ದೇವಾಲಯಗಳ ಜೀರ್ಣೋದ್ಧಾರಗಳು ಕೇವಲ ಕಟ್ಟಡ ಮಾತ್ರವಲ್ಲ ಸಾಮಾಜಿಕ ವ್ಯವಸ್ಥೆಗಳನ್ನೂ ನವೀಕರಿಸುತ್ತದೆ. ಸಚ್ಚಾರಿತ್ರ್ಯವಂತ ನಡತೆ ಹಾಗೂ ಶೀಲ ಇವೆರಡೂ ಸೇರುವುದೇ ಸಮಾಜದ ಯೋಗಕ್ಷೇಮ. ಅನ್ನ ಶಿಕ್ಷಣ, ಸಾಮರಸ್ಯ, ಸಂಸ್ಕಾರ,ಯೋಗಕ್ಷೇಮ ಎಂಬ ಪಂಚಕಾಂಶ ವಿಚಾರಗಳು ಸಮಾಜದ ಸುಸ್ಥಿಗೆ ಪೂರಕವಾಗಿದೆ. ಸಮಾಜ ಕೇಂದ್ರಿತ ಬದುಕು ನಮ್ಮದಾಗಿರುವುದರಿಂದ ದೇವಾಲಯಗಳ ನಿರಂತರ ಸಂಪರ್ಕನಮ್ಮದಾಗಬೇಕು ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಮೋಹನದಾಸಪರಮಹಂಸ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ, ದಯಾಸಾಗರ ಚೌಟ, ವಕೀಲ ಟಿ.ನಾರಾಯಣ ಪೂಜಾರಿ, ವಾಸ್ತುತಜ್ಞ ಜಗನ್ನಿವಾಸ ರಾವ್ ಪುತ್ತೂರು, ವಿಹಿಂಪ ಹಿರಿಯ ನೇತಾರ ಶೇಂತಾರು ನಾರಾಯಣ ಭಟ್ ಕುಂಬಳೆ, ಮೋನಪ್ಪ ಗೌಡ ವಿಟ್ಲ, ಉದ್ಯಮಿ ಪ್ರವೀಣ್ ಭೋಜ ಶೆಟ್ಟಿ, ಪತ್ರಕರ್ತ, ದಯಾಸಾಗರ್ ಚೌಟ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರಭಾಶಂಕರ ಏರಿಕ್ಕಳ ಸ್ವಾಗತಿಸಿದರು. ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಸುಜಿತ್ ಕೆ.ಸಿ. ವಂದಿಸಿದರು.