ಇಡುಕ್ಕಿ: ತೊಡುಪುಳದಲ್ಲಿ ಸಾಕು ನಾಯಿಯನ್ನು ಮಾಲೀಕ ಬರ್ಬರವಾಗಿ ಥಳಿಸಿದ್ದು ಪ್ರಕರಣ ದಾಖಲಾಗಿದೆ. ತೊಡುಪುಳದ ಮುತಲಕೋಡಂ ಮೂಲದ ಶೈಜು ಥಾಮಸ್ ಎಂಬಾತ ತನ್ನ ಸಾಕು ನಾಯಿಯನ್ನು ಬರ್ಬರವಾಗಿ ಹಲ್ಲೆಗೈದು ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಾಯಿಯನ್ನು ಕರೆದಾಗ ಅದು ಹತ್ತಿರ ಬಾರದ ಕಾರಣ ಆ ವ್ಯಕ್ತಿ ಅದನ್ನು ಹೊಡೆದು ತೀವ್ರ ಘಾಸಿಗೊಳಿಸಿದನು ಎಂದು ವರದಿಯಾಗಿದೆ. ತೊಡುಪುಳ ಪೆÇಲೀಸರು ಶೈಜು ಥಾಮಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗಾಯಗೊಂಡ ನಾಯಿಯನ್ನು ಪ್ರಾಣಿ ರಕ್ಷಣಾ ತಂಡವು ಆಶ್ರಯ ತಾಣಕ್ಕೆ ಕರೆದೊಯ್ಯಲಾಗಿದೆ.