ತಿರುವನಂತಪುರಂ: ಸೆಕ್ರೆಟರಿಯೇಟ್ ಮುಂದೆ ತಲೆ ಬೋಳಿಸಿಕೊಂಡವರು ದೆಹಲಿಯಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಸಚಿವ ವಿ. ಶಿವನ್‍ಕುಟ್ಟಿ ಪಂಥಾಹ್ವಾನ ನೀಡಿದ್ದಾರೆ.
ಕತ್ತರಿಸಿದ ಕೂದಲನ್ನು ಕೇರಳದ ಕೇಂದ್ರ ಸಚಿವರ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಛತ್ರಿ ಮತ್ತು ರೇನ್‍ಕೋಟ್‍ಗಳ ಉಡುಗೊರೆಯಿಂದ ಆಶಾ ಕಾರ್ಯಕರ್ತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದವರು ಲೇವಡಿಗೈದಿದ್ದಾರೆ.
ಆಶಾ ಕಾರ್ಯಕರ್ತರು ಸೇರಿದಂತೆ ಸ್ಕೀಮ್ ಕಾರ್ಮಿಕರಿಗೆ ಕಾರ್ಮಿಕರ ಸ್ಥಾನಮಾನ ನೀಡಬೇಕು ಮತ್ತು ಕೇಂದ್ರ ಕಾರ್ಮಿಕ ಕಾಯ್ದೆಯಡಿಯಲ್ಲಿ ನೀಡಲಾಗುವ ಸವಲತ್ತುಗಳಿಗೆ ಅರ್ಹರಾಗಬೇಕು ಎಂದು ಕೋರಿ ಕೇಂದ್ರ ಕಾರ್ಮಿಕ ಸಚಿವರಿಗೆ ಪತ್ರ ಬರೆದು ಹಲವು ದಿನಗಳಾಗಿವೆ, ಆದರೆ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಚಿವರು ಬೊಟ್ಟುಮಾಡಿದ್ದಾರೆ.
ಸುರೇಶ್ ಗೋಪಿ ಮತ್ತು ಜಾರ್ಜ್ ಕುರಿಯನ್ ಅವರಿಗೆ ಶಕ್ತಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲೆಂದು ಅವರು ತಿಳಿಸಿದ್ದಾರೆ. ಈ ಬೇಡಿಕೆಯನ್ನು ಕೇಂದ್ರ ಜಾರಿಗೆ ತರಬೇಕು ಎಂದು ಶಿವನ್‍ಕುಟ್ಟಿ ಹೇಳಿರುವರು.