ಮಂಜೇಶ್ವರ: ವರ್ಕಾಡಿ ಕೊಂಡೆವೂರು ಪಾವೂರು ಗೋವಿಂದಲಚ್ಚಿಲ್ ಸ್ವಾಮಿ ಕೊರಗಜ್ಜ ಸಾನಿಧ್ಯದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಪೂಜಾವಿಧಿ ವಿಧಾನ, ಸಭಾ ಕಾರ್ಯಕ್ರಮ ಕೊರಗಜ್ಜನ ಕೋಲ ಜರುಗಿತು. ವರ್ಕಾಡಿ ದಿನೇಶ್ ತಂತ್ರಿಗಳ ನೇತೃತ್ವದಲ್ಲಿ ಪೂಜಾವಿಧಿ ನಡೆಸಲಾಯಿತು.
ಸಂಜೆ ವರ್ಕಾಡಿ ಕೊಂಡೆವೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಿತು. ನಂತರ ನಡೆದ ಸಭೆಯಲ್ಲಿ ಹಿರಿಯ ಭಜನ ಸಂಕೀರ್ತನೆಗಾರ ಕಾಪು ಬಾಳಿಕೆ ಪದ್ಮನಾಭ ಅಡ್ಯಂತಾಯ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಚಂದ್ರಹಾಸ ಪೂಜಾರಿ ಮುಡಿಮಾರು, ರವಿ ಮುಡಿ ಮಾರು, ಜಯಪ್ರಕಾಶ್ ಅಡ್ಯಂತಾಯ ಕಾಪು ಬಾಳಿಕೆ, ಚಂದ್ರಹಾಸ ಅಂಚನ್ ಮುಡಿಮಾರ್, ನವಿರಾಜ್ ಮುಡಿಮಾರ್,ವಾಮನ, ರಾಜೇಶ್, ಯಶ್ವತ್ ಮುಡಿಮಾರ್ ಮೊದಲಾದವರು ಉಪಸ್ಥಿತರಿದ್ದರು. ನಂತರ ಕೊರಗಜ್ಜನ ಕೋಲ ನಡೆಯಿತು.