ಹೊಸ ಫೋನ್ ಅಂತಾ ಫೋಟೋ, ವಿಡಿಯೋ, ಬೇರೆ ಬೇರೆ ಡೇಟಾವನ್ನು ಉಳಿಸಿಕೊಳ್ತಾನೆ ಇರ್ತೀವಿ. ಆದರೆ ಕ್ರಮೇಣ ದಿನ ಕಳೆದಂತೆ ಫೋನ್‌ನಲ್ಲಿ ಸ್ಟೋರೇಜ್ ಇಲ್ಲ ಅನ್ನೋ ನೋಟಿಫಿಕೇಷನ್ ಬರ್ತಾ ಹೋಗುತ್ತೆ. ಇದಕ್ಕೆ ಪರಿಹಾರ ಇಲ್ಲಿದೆ...
ಫೋನ್‌ನಲ್ಲಿ ಸ್ಟೋರೇಜ್ ಫುಲ್ ಪ್ರಾಬ್ಲಂ?
ಸ್ಮಾರ್ಟ್ ಫೋನ್ ಅನ್ನು ಎಲ್ಲಾ ಉದ್ದೇಶಗಳಿಂದ ಬಳಕೆ ಮಾಡುವ ಕಾರಣ ಫೋನ್‌ನಲ್ಲಿ ಅಧಿಕ ಡೇಟಾಗಳು ಸಂಗ್ರಹವಾಗುತ್ತದೆ. ಒಂದು ಫೋನ್‌ಗೆ ಇಂತಿಷ್ಟು ಸ್ಟೋರೇಜ್ ಅನ್ನೋ ಮಿತಿ ಇರುತ್ತದೆ. ಈ ಮಿತಿ ಮೀರಿದಾಗ ಸ್ಟೋರೇಜ್ ಇಲ್ಲಾ ಅನ್ನೋ ಎಚ್ಚರಿಕೆ ಬರುತ್ತದೆ.
ಸ್ಟೋರೇಜ್ ಫುಲ್ ಆದರೆ ಕೆಲವು ಫೋನ್‌ಗಳು ಸರಿಯಾಗಿ ಕಾರ್ಯ ಕೂಡ ನಿರ್ವಹಿಸಲ್ಲ ಮತ್ತು ಸಖತ್ ಸ್ಲೋ ಆಗಿ ಬಿಡುತ್ತದೆ. ಇಲ್ಲಾ ಹ್ಯಾಂಗ್ ಕೂಡಾ ಆಗಬಹುದು. ಫೋನ್‌ನಲ್ಲಿ ಸ್ಟೋರೇಜ್ ತುಂಬಿದೆ ಎಂಬ ಎಚ್ಚರಿಕೆಯ ಸಂದೇಶ ಬರ್ತಿದ್ದ ಹಾಗೇ ನಾವೆಲ್ಲಾ ಗ್ಯಾಲರಿಗೆ ಹೋಗಿ ಫೋಟೋ, ವಿಡಿಯೋ ಅಥವಾ ಇನ್ಯಾವುದು ಡೇಟಾ ಡಿಲಿಟ್ ಮಾಡಲು ಹೋಗ್ತೀವಿ.
ವ್ಯಾಟ್ಸಾಪ್‌ನಿಂದಲೂ ಫುಲ್ ಆಗುತ್ತೆ ಸ್ಟೋರೇಜ್!
ಕೇವಲ ಇವಿಷ್ಟರಿಂದಲೇ ಮಾತ್ರವಲ್ಲ, ನಾವು ದಿನನಿತ್ಯ ಬಳಸೋ ವ್ಯಾಟ್ಸಾಪ್‌ನಿಂದ ಕೂಡ ನಮ್ಮ ಫೋನ್ ಸ್ಟೋರೇಜ್ ಫುಲ್ ಆಗುತ್ತದೆ ಅಂತಾ ಗೊತ್ತಾ ನಿಮಗೆ?
ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮತ್ತು ಸಂವಹನವನ್ನು ಸುಲಭಗೊಳಿಸಲು ವ್ಯಾಟ್ಸಾಪ್ ವಿವಿಧ ವೈಶಿಷ್ಟ್ಯಗಳನ್ನು ನೀಡುತ್ತದೆ. ಛಾಯಾಚಿತ್ರಗಳು, ವೀಡಿಯೊಗಳು ಮತ್ತು ದಾಖಲೆಗಳಂತಹ ಡೌನ್‌ಲೋಡ್ ಮಾಡಿದ ಮಾಧ್ಯಮ ಫೈಲ್‌ಗಳನ್ನು ಕೂಡ ಇದು ನಮ್ಮ ಗ್ಯಾಲರಿಗೆ ಸೇರಿಸುತ್ತದೆ. ಇದು ಉಪಯೋಗಕ್ಕೆ ಬರುವುದಾದರೂ, ಇದು ಆಗಾಗ್ಗೆ ಅನಗತ್ಯ ಜಾಗವನ್ನು ಫೋನ್‌ನಲ್ಲಿ ಕಬಳಿಸಿ ಬಿಡುತ್ತದೆ.
ವ್ಯಾಟ್ಸಾಪ್ ಮೂಲಕ ನಿಮ್ಮ ಫೋನ್ ಸ್ಟೋರೇಜ್ ಭರ್ತಿಯಾಗುವುದನ್ನು ಹೇಗೆ ತಡೆಯುವುದು? ಸ್ವಯಂ-ಡೌನ್‌ಲೋಡ್ ಮಾಧ್ಯಮ ಫೈಲ್‌ಗಳನ್ನು ಆಫ್ ಮಾಡುವ ಮೂಲಕ ಹೇಗೆ ಸ್ಟೋರೇಜ್ ಅನ್ನು ಮ್ಯಾನೇಜ್ ಮಾಡೋದು ಅನ್ನೋದನ್ನು ಇಲ್ಲಿ ನೋಡೋಣ.
ವ್ಯಾಟ್ಸಾಪ್ ಚಾಟ್ ಮತ್ತು ಫೋಟೋಗಳ ಮೂಲಕ ನಿಮ್ಮ ಸ್ಟೋರೇಜ್ ಫುಲ್ ಆಗಿದೆಯೇ? ಇಲ್ಲಿದೆ ಪರಿಹಾರ
- ನಿಮ್ಮ ಫೋನ್‌ನಲ್ಲಿ ಮೊದಲಿಗೆ ವ್ಯಾಟ್ಸಾಪ್ ತೆರೆಯಿರಿ
- ಹೆಚ್ಚಿನ ಆಯ್ಕೆಗಳನ್ನು ಪ್ರವೇಶಿಸಲು ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಮೆನುವಿನ ಮೇಲೆ ಟ್ಯಾಪ್ ಮಾಡಿ
- ಡ್ರಾಪ್-ಡೌನ್ ಮೆನುವಿನಿಂದ, ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ಚಾಟ್‌ಗೆ ಹೋಗಿ
- ಇಲ್ಲಿ ನೀವು ʼಮೀಡಿಯಾ ವಿಸಿಬಿಲಿಟಿʼ ಆಯ್ಕೆಯನ್ನು ಆಫ್ ಮಾಡಿ. ನೀವು ಐಫೋನ್ ಬಳಕೆದಾರರಾಗಿದ್ದರೆ, ಟಾಗಲ್ ಆಫ್ ಮಾಡಿ.
- ʼಮೀಡಿಯಾ ವಿಸಿಬಿಲಿಟಿʼ ಆಫ್ ಮಾಡಿದಲ್ಲಿ, ಡೌನ್‌ಲೋಡ್ ಮಾಡಿದ ಯಾವುದೇ ಹೊಸ ಮಾಧ್ಯಮ ಫೈಲ್‌ಗಳು ನಿಮ್ಮ ಫೋನ್ ಗ್ಯಾಲರಿಯಲ್ಲಿ ಗೋಚರಿಸುವುದಿಲ್ಲ. ಜೊತೆಗೆ ನಿಮ್ಮ ಫೋನ್‌ನಲ್ಲಿ ಬೇಡದ ಫೈ;ಲ್‌ಗಳು ಕೂಡ ಸೇವ್ ಆಗಲ್ಲ. ಸ್ವಯಂ-ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಿದ ನಂತರ, ನಿಮಗೇನಾದರೂ ಫೋಟೋ, ಫೈಲ್ ಬೇಕು ಎಂದರೆ ನೀವು ಅದನ್ನು ಹಸ್ತಚಾಲಿತವಾಗಿ ಡೌನ್‌ಲೋಡ್ ಮಾಡಬೇಕಾಗುತ್ತದೆ.